7.5 ಲಕ್ಷ ರೂ. ಕಳೆದುಕೊಂಡ ವೈದ್ಯ

ಕ್ರೈಮ್
ಕ್ರೈಮ್
Published on
ಆಯುರ್ವೇದ ಔಷಧಿಯನ್ನು ಕಡಿಮೆ ಬೆಲೆ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು ಎಂದು ಆನ್‌ಲೈನ್ ವಂಚಕರ ಮಾತಿಗೆ ಮರುಳಾದ ವೈದ್ಯರೊಬ್ಬರು 7.5 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಮೈಸೂರು ನಗರದ ಗೋಕುಲಂ ನಿವಾಸಿಯಾದ ಆಯುರ್ವೇದ ವೈದ್ಯರೇ ಲಾಭದಾಸೆ ಹೋಗಿ ಹಣ ಕಳೆದು ಕೊಂಡವರು.
ಭಾರತದಲ್ಲಿ ಸಿಗುವ ಕಚ್ಚಾ ಅಯುರ್ವೇದ ಔಷಧಿಯನ್ನು ಖರೀದಿಸಿ ಹೆಚ್ಚಿನ ಬೆಲೆಗೆ ನಮ್ಮ ಕಂಪೆನಿಗೆ ಮಾರುವಂತೆ ವಂಚಕರು ನೀಡಿದ ಆಮಿಷಕ್ಕೆ ಮರುಳಾದ ವೈದ್ಯರು, 10 ಕೆಜಿ ಔಷಧಿ ಕೊಳ್ಳಲು ಹಣವನ್ನು ಕೊಳ್ಳಲು ವಂಚಕ ನೀಡಿದ ಕಂಪೆನಿಗೆ ಹಣವನ್ನು ವರ್ಗಾವಣೆ ಮಾಡಿದ್ದು, ಔಷಧಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಿದ್ದತೆ ನಡೆಸಿದ್ದರು. ಆದರೆ ಕೊರಿಯರ್ ಮೂಲಕ 10 ಕೆಜಿ ಬದಲು 3 ಕೆಜಿ ಔಷಧಿ ಬಂದಿದ್ದು, ಈ ಬಗ್ಗೆ ವಿಚಾರಿಸಿದಾಗ ಮತ್ತೇ ಹಣವನ್ನು ವರ್ಗಾವಣೆ ಮಾಡುವಂತೆ ವಂಚಕರು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ವೈದ್ಯರಿಗೆ ತಾವು ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net