ತ.ನಾಡಿನ ವಾಟರ್‌ಮನ್ ಆಗದಿರಲಿ ಡಿಕೆಶಿ

ಸಿ.ಟಿ.ರವಿ
ಸಿ.ಟಿ.ರವಿ
Published on

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮಿಳುನಾಡಿನ ವಾಟರ್‌ಮನ್ ಆಗಬಾರದು. ನಮ್ಮ ಜಲಾಶಯಗಳ ನಿಜವಾದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ಶುಕ್ರವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು. ತಮಿಳುನಾಡಿನಲ್ಲಿರುವುದು ಕಾಂಗ್ರೆಸ್‌ಗೆ ಮಿತ್ರ ಪಕ್ಷವೇ ಅಲ್ಲವೇ? ನಿಮ್ಮ ಮಿತ್ರರಿಗೆ ಕೆ.ಆರ್.ಎಸ್‌ನಲ್ಲಿರುವ ನೀರಿಲ್ಲದ ಸ್ಥಿತಿಯನ್ನು ತಿಳಿಸಲು ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಬಂಗಾರಪ್ಪ ಅವರ ಮಾದರಿಯಲ್ಲಿ ಧೈರ್ಯ ತೋರಿ ನೀರು ಬಿಡದಿರಲು ಸಡ್ಡು ಹೊಡೆಯಿರಿ. ಡಿ.ಕೆ.ಶಿವಕುಮಾರ್ ಅವರು ತಮಿಳುನಾಡಿನ ವಾಟರ್‌ಮನ್ ಆಗಬಾರದು, ರಾಜ್ಯದ ಜನರ ಹಿತ ಕಾಯಲು ನೀವು ಸಿಎಂ ಆಗಿದ್ದೀರಾ. ಮೊದಲು ಕೆ.ಆರ್.ಎಸ್‌ನಲ್ಲಿ ಕುಡಿಯುವ ನೀರು ಎಷ್ಟಿದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net