ನಂಜನಗೂಡಿನಲ್ಲಿ ಕಬಿನಿ ನದಿಗೆ ಅಡ್ಡಲಾಗಿ ಎರಡು ಪ್ರಮುಖ ಸೇತುವೆಗಳಿದ್ದು, ಒಂದು ಸೇತುವೆ (ಎರಡು ಸೇತುವೆಗಳಲ್ಲಿ) ಹಳೇ ಸೇತುವೆಯಾಗಿದೆ ಮತ್ತು ಇನ್ನೊಂದು ಹೊಸದಾಗಿ ನಿರ್ಮಿಸಲಾದ ಸಮಾನಾಂತರ ಸೇತುವೆಯಾಗಿದೆ. ಮೈಸೂರಿನಿಂದ ನಂಜನಗೂಡು ಕಡೆಗೆ ಸಂಚಾರವು ಹೊಸದಾಗಿ ನಿರ್ಮಿಸಲಾದ ಸೇತುವೆಯ ಮೇಲೆ ಮತ್ತು ನಂಜನಗೂಡಿನಿಂದ ಮೈಸೂರು ಕಡೆಗೆ ಸಂಚಾರವು ಹಳೆಯ ಅಸ್ತಿತ್ವದಲ್ಲಿರುವ ಸೇತುವೆಯ ಮೇಲೆ ಚಲಿಸುತ್ತಿದ್ದು, ಹಳೆಯ ಸೇತುವೆಯು ಶಿಥಿಲವಾಗಿದ್ದು, ಹಳೆಯ ಸೇತುವೆಯ ದುರಸ್ತಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲಾ ವಾಹನಗಳ ಸಂಚಾರವನ್ನು ಹಳೆಯ ಸೇತುವೆಯಿಂದ ಹೊಸದಾಗಿ ನಿರ್ಮಿಸಲಾದ ಸೇತುವೆಗೆ ತಾತ್ಕಾಲಿಕವಾಗಿ ಬದಲಾಯಿಸಿ ಆದೇಶ ಹೊರಡಿಸಲಾಗಿದೆ.