ಮಹಿಳಾ ಕ್ರೀಡಾಪಟುಗಳಿಗೆ ಟಿ-ಶರ್ಟ್ ವಿತರಣೆ

ರಾಷ್ಟ್ರೀಯ ಮಹಿಳಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ಮಾಸ್ಟರ್ಸ್ ತಂಡವನ್ನು ಪ್ರತಿನಿಧಿಸುವ ಮಹಿಳಾ ಕ್ರೀಡಾಪಟುಗಳಿಗೆ ಟಿ-ಶರ್ಟ್ ವಿತರಿಸಲಾಯಿತು. ಸುಮನಾ ಎನ್. ಮೂರ್ತಿ, ಎಂ. ಯೋಗೇಂದ್ರ, ಬಿ.ಬಸವರಾಜು, ಚೆನ್ನಯ್ಯ, ಕೆ.ಎನ್.ಸೋಮಶೇಖರ್, ಎಂ.ಪಿ.ಚಂದ್ರಶೇಖರ್ ಇದ್ದರು.

Published on
3ನೇ ರಾಷ್ಟ್ರೀಯ ಮಹಿಳಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯ ಮಾಸ್ಟರ್ಸ್ ತಂಡವನ್ನು ಪ್ರತಿನಿಧಿಸುವ ಮಹಿಳಾ ಕ್ರೀಡಾಪಟುಗಳಿಗೆ ಟಿ-ಶರ್ಟ್ ವಿತರಿಸಲಾಯಿತು.
ಮೈಸೂರು ಜಿಲ್ಲಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಷನ್ ವತಿಯಿಂದ ಅಶೋಕಪುರಂನ ಆರ್‌ಎನ್ ಎಂಟರ್‌ಸ್ರೈಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಸುಮನಾ ಎನ್.ಮೂರ್ತಿ, ಉಪಾಧ್ಯಕ್ಷ ಎಂ. ಯೋಗೇಂದ್ರ ಮತ್ತು ಕಾರ್ಯದರ್ಶಿ ಬಿ.ಬಸವರಾಜು ಅವರು ಮಹಿಳಾ ಕ್ರೀಡಾಪಟುಗಳಿಗೆ ಟಿ-ಶರ್ಟ್ ವಿತರಿಸಿ, ಶುಭ ಕೋರಿದರು.
ಸಂಘದ ಕಾರ್ಯಕಾರಿ ಸದಸ್ಯರಾದ ಚೆನ್ನಯ್ಯ, ಕೆ.ಎನ್.ಸೋಮಶೇಖರ್, ಎಂ.ಪಿ.ಚಂದ್ರಶೇಖರ್, ಎನ್.ವಿನಾಯಕ, ಮಹೇಶ್, ಮಹಾದೇವಯ್ಯ, ಪಾರ್ವತಿ ಕಾಂತರಾಜ್, ಬಲರಾಮೇ ಗೌಡ ಇದ್ದರು.

ಗೋವಾದಲ್ಲಿ ಪಂದ್ಯ:

ಮೇ 30 ಮತ್ತು 31 ರಂದು ಗೋವಾದಲ್ಲಿ 3ನೇ ರಾಷ್ಟ್ರೀಯ ಮಹಿಳಾ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯಲಿದ್ದು, ಟಿ. ಎಸ್.ಸುಬ್ಬಲಕ್ಷ್ಮಿ, ಎಚ್.ಎಂ.ಸುಜಾತಾ, ವಿಜಯ ರಮೇಶ್, ಎಚ್.ಎಂ.ಭಾರತಿ ಹಾಗೂ ಶರ್ಮಿಳಾ ಅರಸ್ ಭಾಗವಹಿಸಲಿದ್ದಾರೆ. ಸಂಘದ ಕಾರ್ಯದರ್ಶಿ ಬಿ.ಬಸವರಾಜು ಅವರು ಕರ್ನಾಟಕ ರಾಜ್ಯ ಮಹಿಳಾ ಅಥ್ಲೆಟಿಕ್ಸ್ ತಂಡವನ್ನು ವ್ಯವಸ್ಥಾಪಕರಾಗಿ ಮುನ್ನಡೆಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net