ವಂಚಕರು, ಆಧಾರ್ ಹಾಗೂ ಬ್ಯಾಂಕ್ ದಾಖಲೆಗಳು ಅಪರಾಧ ಪ್ರಕರಣದಲ್ಲಿ ಪತ್ತೆಯಾಗಿವೆ ಎಂದು ನಂಬಿಸಿ, ಹಣಕಾಸು ಆಸ್ತಿಗಳನ್ನು ಪರಿಶೀಲಿಸಬೇಕೆಂದು ಹೇಳಿದ್ದರು. ಅಲ್ಲದೆ, ಡಿಜಿಟಲ್ ಅರೆಸ್ಟ್‌ನಲ್ಲಿ ಇದ್ದೀರಿ, ಈ ವಿಷಯವನ್ನು ಯಾರಿಗೂ ತಿಳಿಸಬಾರದು ಹಾಗೂ ನಿರಂತರ ವಿಡಿಯೊ ಕರೆಯಲ್ಲೇ ಇರಬೇಕು ಎಂದು ಸೂಚಿಸಿ, ಅವರ ಬ್ಯಾಂಕ್ ಖಾತೆಗಳ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದರು.