ಕಪಿಲಾ ನದಿ ದಂಡೆಯಲ್ಲಿ ಮರಗಳ ಹನನ: ಪ್ರತಿಭಟನೆ

 ಕಪಿಲಾ ನದಿ ದಂಡೆಯ ಮೇಲೆ ಮರಗಳನ್ನು ಅಕ್ರಮವಾಗಿ ಕಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಲೀಲಾ, ಭಾಗ್ಯ, ಅಂಜನಾ, ಸುಗುಣ, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ರವಿಕುಮಾರ್, ಸೋಮಸುಂದರ್, ಶೋಭನಾ ಇನ್ನಿತರರಿದ್ದರು.
ಕಪಿಲಾ ನದಿ ದಂಡೆಯ ಮೇಲೆ ಮರಗಳನ್ನು ಅಕ್ರಮವಾಗಿ ಕಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಲೀಲಾ, ಭಾಗ್ಯ, ಅಂಜನಾ, ಸುಗುಣ, ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ರವಿಕುಮಾರ್, ಸೋಮಸುಂದರ್, ಶೋಭನಾ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮರಗಳನ್ನು ಕಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯ
  • ವಿವಿಧ ಸಂಘಟನೆಗಳಿಂದ ಅರಣ್ಯ ಭವನದ ಎದುರು ಪ್ರತಿಭಟನೆ
ಮೈಸೂರು: ನಂಜನಗೂಡಿನ ಹೆಜ್ಜಿಗೆ ಗ್ರಾಮದ ಬಳಿ ಕಪಿಲಾ ನದಿ ದಂಡೆಯ ಮೇಲೆ 46 ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ನಗರದ ಅರಣ್ಯ ಭವನದ ಎದುರು ಪ್ರತಿಭಟನೆ ನಡೆಸಿದರು.
‘ಪರಿಸರಕ್ಕಾಗಿ ನಾವು’, ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸೇರಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಮರಗಳ ಕಟಾವು ಖಂಡಿಸಿದರು. ಕರ್ತವ್ಯ ಲೋಪ ಎಸಗಿದ ಅರಣ್ಯ ಇಲಾಖೆ ಅಧಿಕಾರಿಗಳ ಕ್ರಮಕ್ಕೆ ಆಗ್ರಹಿಸಿದರು.
‘ಪರಿಸರಕ್ಕಾಗಿ ನಾವು’ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ಮಾತನಾಡಿ, ಘಟನೆ ನಡೆದು ಎರಡು ವಾರಗಳಾದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ತಲೆಮರೆಸಿಕೊಂಡಿರುವ ಆರೋಪಿಯನ್ನು ಬಂಧಿಸಿಲ್ಲ. 
ಮರಗಳನ್ನು ಅಕ್ರಮವಾಗಿ ಕಡಿಯಲು ಕಾರಣರಾದವರನ್ನು ಇನ್ನೂ ಪತ್ತೆ ಹಚ್ಚಿಲ್ಲ. ಇಷ್ಟು ಗಂಭೀರವಾದ ಘಟನೆಯನ್ನು ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಹಗುರವಾಗಿ ತೆಗೆದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಹಾಡಹಗಲೇ ರಾಜಾರೋಷವಾಗಿ ಸರ್ಕಾರಿ ಜಾಗದಲ್ಲಿ 46 ಬೃಹತ್ ಮರಗಳನ್ನು ಅಕ್ರಮವಾಗಿ ಕಡಿದಿರುವುದು ಅರಣ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನಿಷ್ಕ್ರಿಯತೆಯನ್ನು ತೋರಿಸುತ್ತದೆ.
 ಈ ಘಟನೆ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಿ ಮರಗಳನ್ನು ಕಡಿದರವರಿಗೆ, ಕಡಿಯಲು ಕಾರಣರಾದವರಿಗೆ ಮತ್ತು ಇವರ ಜತೆಗೆ ಶಾಮೀಲಾಗಿರುವವರಿಗೆ ಶಿಕ್ಷೆ ವಿಧಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅರಣ್ಯ ಉಪ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ’ಪರಿಸರಕ್ಕಾಗಿ ನಾವು’ ಸಂಘಟನೆಯ ಲೀಲಾ, ಭಾಗ್ಯ, ಅಂಜನಾ, ಸುಗುಣ, ಪ್ರಭಾ, ಗಂಟಯ್ಯ, ಬಾನು ಪ್ರಶಾಂತ್, ಶೈಲಜೇಶ್, ಗುರುಸ್ವಾಮಿ, ಸವಿತಾ, ಸ್ಮಿತಾ, ಅಕ್ಬರ್, ಬಂಗಾರ ನಾಯಕ, ವಿಶ್ವನಾಥ್, ಸುಧೀರ್, ಶಿವಶಂಕರ್, ಸುಮಲತಾ, ಶ್ಯಾಮಲಾ, ರೈತ ಸಂಘದ ಮುಖಂಡರಾದ ಹೊಸಕೋಟೆ ಬಸವರಾಜು, ಪಿ.ಮರಂಕಯ್ಯ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ಮತ್ತು ಉಪಾಧ್ಯಕ್ಷ ಸೋಮಸುಂದರ್, ಮೈಸೂರು ಗ್ರಾಹಕರ ಪರಿಷತ್ತಿನ ಶೋಭನಾ, ಟೀಮ್ ಮೈಸೂರಿನ ಗೋಕುಲ, ಭಾನುಮೋಹನ್ ಹಾಗೂ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net