ವೃತ್ತದ ಗುಂಡಿ ದುರಸ್ತಿಗೆ ಇಲಾಖೆಯಿಂದ ಕ್ರಮ

ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆಯ ಪ್ರಕ್ರಿಯೆ ನೀಡಿರುವ ಪತ್ರ.
ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆಯ ಪ್ರಕ್ರಿಯೆ ನೀಡಿರುವ ಪತ್ರ.
Published on
ಬೆಟ್ಟದಪುರ: ಇಲ್ಲಿಗೆ ಸಮೀಪದ ಅತ್ತಿಗೋಡು ಗ್ರಾಮದ ವೃತ್ತದಲ್ಲಿ ಬಾಯ್ತೆರೆದ ಗುಂಡಿಯನ್ನು ಮುಚ್ಚಲು ಲೋಕೋಪಯೋಗಿ ಇಲಾಖೆ ಕ್ರಮ ತೆಗೆದುಕೊಂಡಿದೆ.
ಅತ್ತಿಗೋಡು ಗ್ರಾಮದ ವೃತ್ತದಲ್ಲಿ ಬೃಹತ್ ಗುಂಡಿಯಿಂದ ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿ, ಪ್ರತಿನಿತ್ಯ ಜೀವಭಯದಿಂದ ಸಂಚಾರ ಮಾಡಬೇಕಿತ್ತು. ಸಮಸ್ಯೆ ಕುರಿತು ಕನ್ನಡ ನಂ.1 ದಿನಪತ್ರಿಕೆ ವಿಜಯವಾಣಿ ಜ.29ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ವರದಿಯು ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಡಾ.ಕೆ.ವೈಷ್ಣವಿ ಅವರ ಗಮನ ಸೆಳೆದು, ಸಂಬಂಧಿಸಿದ ಇಲಾಖೆಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಈ ಕುರಿತು ಪಿರಿಯಾಪಟ್ಟಣ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ವೃತ್ತ ದುರಸ್ತಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net