ಪ್ರಜಾಪ್ರಭುತ್ವ ಆಳುತ್ತಿವೆ ಹಣ ಬಲ, ತೋಳ್ಬಲ

   ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅಂಬೇಡ್ಕರ್, ಎನ್.ರಾಚಯ್ಯ ಭಾವಚಿತ್ರಕ್ಕೆ ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪನಮನ ಸಲ್ಲಿಸಿದರು. ಡಾ.ಉಮಾಪತಿ, ಪ್ರೊ.ಕೃಷ್ಣ ಹೊಂಬಾಳ್, ಎಚ್.ಆರ್.ರಾಜಶೇಖರ್ ಇದ್ದರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ವಿಚಾರಸಂಕಿರಣದಲ್ಲಿ ಅಂಬೇಡ್ಕರ್, ಎನ್.ರಾಚಯ್ಯ ಭಾವಚಿತ್ರಕ್ಕೆ ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಪುಷ್ಪನಮನ ಸಲ್ಲಿಸಿದರು. ಡಾ.ಉಮಾಪತಿ, ಪ್ರೊ.ಕೃಷ್ಣ ಹೊಂಬಾಳ್, ಎಚ್.ಆರ್.ರಾಜಶೇಖರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಪ್ರಾಧ್ಯಾಪಕ ಡಾ.ಉಮಾಪತಿ ಕಳವಳ
  • ಭಾರತದಲ್ಲಿ ಸಮಕಾಲೀನ ರಾಜ್ಯ, ಪ್ರಜಾಪ್ರಭುತ್ವ ಮತ್ತು ಸಮಾಜ ಕಲ್ಯಾಣ ಕುರಿತು ವಿಚಾರ ಸಂಕಿರಣ
ಮೈಸೂರು: ಪ್ರಸ್ತುತ ನೈಜ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿದಿಲ್ಲ. ಹಣ ಬಲ ಮತ್ತು ತೋಳ್ಬಲಗಳು ಪ್ರಜಾಪ್ರಭುತ್ವವನ್ನು ಆಳುತ್ತಿವೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಉಮಾಪತಿ ಕಳವಳವ್ಯಕ್ತಪಡಿಸಿದರು.
ಮೈಸೂರು ವಿಶ್ವವಿದ್ಯಾಲಯದ ಎನ್.ರಾಚಯ್ಯ ಅಧ್ಯಯನ ಪೀಠ, ರಾಜ್ಯಶಾಸ್ತ್ರ ವಿಭಾಗದ, ಸಾರ್ವಜನಿಕ ಆಡಳಿತ ವಿಭಾಗದ ಸಹಯೋಗದಲ್ಲಿ ಮಂಗಳವಾರ ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ಭಾರತದಲ್ಲಿ ಸಮಕಾಲೀನ ರಾಜ್ಯ, ಪ್ರಜಾಪ್ರಭುತ್ವ ಮತ್ತು ಸಮಾಜ ಕಲ್ಯಾಣ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದರು. 
ಪ್ರಜಾಪ್ರಭುತ್ವದ ಗುಣಮಟ್ಟವನ್ನು ಕ್ಷೀಣಿಸುವ ಕೆಲಸಗಳಾಗಿವೆ. ಚುನಾವಣೆಯಿಂದ ಮಾತ್ರ ಪ್ರಜಾತಂತ್ರ ಉಳಿಸಲು ಸಾಧ್ಯವಿಲ್ಲ. ಹೀಗಾಗಿ ಪ್ರಜಾಪ್ರಭುತ್ವವೇ ದೇಶದ ಸಂಸ್ಕೃತಿಯಾಗಿ ಬೇರೂರಬೇಕು. ಸಂಸತ್ ಕೂಡ ಸರಿಯಾದ ದಿಕ್ಕಿನಲ್ಲಿ ಸಾಗಬೇಕು. ರಾಜ್ಯ ವಿಧಾನಸಭಾ ಕಲಾಪದಲ್ಲಿ ಶಾಸಕರ ಲಿಖಿತ ಪ್ರಶ್ನೆಗಳಿಗೆ ಸಚಿವರ ಉತ್ತರ ನೀಡದಿರುವ ಪ್ರಕ್ರಿಯೂ ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಪಕ್ಷಗಳು ಪಾತ್ರ ಮುಖ್ಯ. ಇತ್ತೀಚೆಗೆ ವಿಧಾನ ನಡೆದ ಕಲಾಪದಲ್ಲಿ ಎಲ್ಲ ಕ್ಷೇತ್ರದ ಶಾಸಕರೂ, ವಿರೋಧ ಪಕ್ಷಗಳ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿಲ್ಲ. ಇದು ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಅಸಮಾಧಾನಕ್ಕೆ ಕಾರಣವಾಗಿ ಹೊರನಡೆದಿದ್ದಾರೆ. ಇಂತಹ ಪ್ರಸಂಗಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ತರವಲ್ಲ ಎಂದು ಹೇಳಿದರು. 
ವಿಧಾನಸಭೆಯ ಕಲಾಪ ಒಂದು ತಿಂಗಳು ನಡೆದರೆ ಅದರಲ್ಲಿ ಮೊದಲ 10 ದಿನವನ್ನು ಪ್ರತಿಪಕ್ಷಗಳಿಗೆ ಮೀಸಲಿಡಬೇಕು. ನಂತರ ಸಚಿವರಿಂದ ಉತ್ತರ ನೀಡುವ ಪ್ರಕ್ರಿಯೆ ನಡೆಯಬೇಕು. ಉಳಿದ ದಿನಗಳಲ್ಲಿ ಹೊಸ ಕಾಯ್ದೆ-ಶಾಸನ ಅನುಷ್ಠಾನಗೊಳಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು. 
ಉಚಿತ ಯೋಜನೆಗಳು ರಾಜ್ಯಗಳ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿವೆ. ಹೀಗಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಯೋಜನೆಗಳ ಘೋಷಣೆ ನಿಲ್ಲಿಸಬೇಕು. ಮಹಾರಾಷ್ಟ್ರ ಅರಣ್ಯ ಸಚಿವರು ಲಡಾಕಿ ಬೆಹಾನ್ ಯೋಜನೆ ಜಾರಿಗೆ ತಂದಿದ್ದು, ಇದಕ್ಕೆ ಹಣ ಇಲ್ಲದೆ 12 ಸಾವಿರ ಎಕರೆ ಕಾಡನ್ನು ಕಡಿದು ಇದನ್ನು ಅನುಷ್ಠಾನಗೊಳಿಸಬಹುದು ಎನ್ನುತ್ತಿದ್ದಾರೆ. ಇದು ಸೂಕ್ತ ಕ್ರಮವಲ್ಲ ಎಂದು ಕಿಡಿಕಾರಿದರು.
ಮೈವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಮಾನವಿಕ ಅಧ್ಯಯನ ಸಂಸ್ಥೆಗಳಲ್ಲಿ ಗುಣಮಟ್ಟ ಕ್ಷೀಣಿಸುತ್ತಿದೆ. ಇದನ್ನು ಉತ್ಕೃಷ್ಟಗೊಳಿಸುವ ಕಾರ್ಯವನ್ನು ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ವಿದ್ಯಾರ್ಥಿಗಳು ಮಾಡಬೇಕು. ಆದರೆ ಈಗಿನ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುತ್ತಿದ್ದಾರೆ. ಅಂಕಗಳಿಗಾಗಿ ಮಾತ್ರ ಓದುತ್ತಿದ್ದಾರೆ. ರಾಜಕೀಯ ಪರಿವರ್ತನೆ ಬಗ್ಗೆ ಆಲೋಚಿಸುತ್ತಿಲ್ಲ ಎಂದು ಬೇಸರವ್ಯಕ್ತಪಡಿಸಿದರು.
ರಾಜ್ಯಶಾಸ್ತ್ರ ವಿದ್ಯಾರ್ಥಿಗಳು ರಾಜಕೀಯ ಕ್ಷೇತ್ರವನ್ನು ಅಧ್ಯಯನ ಮಾಡಬೇಕು. ಎನ್.ರಾಚಯ್ಯ ಅವರ ಜೀವನವನ್ನು ಸಮಕಾಲೀನಗೊಳಿಸಿ ಇಂದಿನ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ಈ ರೀತಿಯ ಚಿಂತನೆ ವಿದ್ಯಾರ್ಥಿಗಳಲ್ಲಿ ಬರಬೇಕು ಎಂದರೆ ನಿತ್ಯ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಅಲೋಚನ ಕ್ರಮ ಪರಿವರ್ತನೆಯಾಗಲಿದೆ ಎಂದರು.
ಇಡೀ ಪ್ರಪಂಚವೇ ದುಸ್ಥಿತಿಗೆ ಬಂದಿಲ್ಲ. ಕೆಲ ದೇಶಗಳಲ್ಲಿ ಯುದ್ಧವಾಗುತ್ತಿದೆ. ಇದರ ಪರಿಣಾಮವನ್ನು ನಾವು ಕೂಡ ಎದುರಿಸುತ್ತಿವೆ. ಇದಕ್ಕೆಲ್ಲ ಕಾರಣ ರಾಜಕಾರಣಿಗಳು. ತಾನು ಶ್ರೇಷ್ಠ ಎನ್ನುವ ಮನಸ್ಥಿತಿಯಿಂದ ಯುದ್ಧಗಳು ನಡೆಯುತ್ತಿವೆ ಎಂದರು.
ಮೈವಿವಿ ರಾಜ್ಯಶಾಸ್ತ್ರದ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಹೊಂಬಾಳ್, ಎನ್.ರಾಚಯ್ಯ ಅಧ್ಯಯನ ಪೀಠದ ಮುಖ್ಯಸ್ಥ ಎಚ್.ಆರ್.ರಾಜಶೇಖರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net