ಆರ್‌ಟಿಒ ಸಮಸ್ಯೆ ಬಗೆಹರಿಸಲು ಆಗ್ರಹ

ಆರ್ ಟಿಒ
ಆರ್ ಟಿಒ
Published on

ಪ್ರಮುಖ ಮುಖ್ಯಾಂಶಗಳು

  • ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘ ಆಗ್ರಹ
  • ಪರೀಕ್ಷೆ ಮೊದಲಾದವುಗಳಲ್ಲಿ ಬೇರೆ ಬೇರೆಯವರು ಭಾಗಿಯಾಗಿ ಅವರಿಗೆ ಚಾಲನಾ ಪರವಾನಗಿ ನೀಡಿರುವುದು ಕೇರಳದಲ್ಲಿ ಸದ್ದು ಮಾಡಿರುವ ಸುದ್ದಿ
ಮೈಸೂರು: ನಗರದ ಆರ್‌ಟಿಒ ಕಚೇರಿಗಳಲ್ಲಿ ಎಲ್‌ಎಲ್‌ಆರ್, ಡಿಎಲ್, ಎಫ್‌ಸಿ  ಸಂಬಂಧಿಸಿದಂತೆ ಉಂಟಾಗಿರುವ ಸಮಸ್ಯೆ ಬಗೆಹರಿಸಬೇಕು ಎಂದು ಮೋಟಾರ್ ಡ್ರೈವಿಂಗ್ ಸ್ಕೂಲ್ ಮಾಲೀಕರ ಸಂಘ ಆಗ್ರಹಿಸಿದೆ.
 ಆರ್‌ಟಿಒ ಕಚೇರಿಗೆ ಹೋದರೆ ಪ್ರವೇಶ ನೀಡುವುದಿಲ್ಲ. ಮಂಡ್ಯದಲ್ಲಿ ಶುಲ್ಕ ಕಟ್ಟಿದವರಿಗೂ ನಗರದಲ್ಲಿ ಎಫ್‌ಸಿ ಮಾಡಲಾಗುತ್ತಿದೆ. ಇದರಿಂದ ಇಲ್ಲಿನ ಕಚೇರಿ ಬೊಕ್ಕಸಕ್ಕೆ ಹಣ ಖೋತಾ ಆಗುತ್ತಿದೆ ಎಂದು ಸಂಘದ ಅಧ್ಯಕ್ಷ ಎಂ. ಆನಂದ್‌ಕುಮಾರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇರಳದವರು ತಮಗೆ ಚಾಲನಾ ಪರವಾನಗಿ ಬೇಕೆಂದು ನಗರದ ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ನಂತರದ ಪ್ರಕ್ರಿಯೆಗಳಲ್ಲಿ ಅವರು ಭಾಗವಹಿಸಬೇಕಾದ ಪರೀಕ್ಷೆ ಮೊದಲಾದವುಗಳಲ್ಲಿ ಬೇರೆ ಬೇರೆಯವರು ಭಾಗಿಯಾಗಿ ಅವರಿಗೆ ಚಾಲನಾ ಪರವಾನಗಿ ನೀಡಿರುವುದು ಕೇರಳದಲ್ಲಿ ಸುದ್ದಿಯಾಯಿತು.
 ಇದು ಇಲ್ಲಿನ ಆರ್‌ಟಿಒ ಇಲಾಖೆಗೆ ಮುಜುಗರವುಂಟು ಮಾಡಿತು. ಈ ಘಟನೆ ಬಳಿಕ ಎಲ್‌ಎಲ್‌ಆರ್ ಮಾಡಿಸಿಕೊಂಡು ಡಿಎಲ್ ಪಡೆಯಲೆಂದು ಆರ್‌ಟಿಒ ಕಚೇರಿಗೆ ಧಾವಿಸುವವರಿಗೆ ಅನಗತ್ಯ ಕಾರಣ ನೀಡಿ ವಾಪಸ್ ಕಳಿಸಲಾಗುತ್ತಿದೆ. ಈ ಬಗ್ಗೆ ತಾವು ಧ್ವನಿಯೆತ್ತಿದಾಗ ತಮ್ಮನ್ನು ಬೆದರಿಸಿ ಸುಮ್ಮನಾಗಿಸುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 
ಸಂಘದ ನದೀನ್, ಎ. ಸಾಗರ್‌ಬಾಬು, ಸಾಜಿದ್, ಸ್ವಾಮಿ, ಕುಮಾರ್, ಜಗದೀಶ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net