ಕುಕ್ಕರಹಳ್ಳಿಕೆರೆಗೆ ಬ್ಯಾಕ್‌ವಾಶ್ ನೀರು ಹರಿಸಲು ಆಗ್ರಹ

 ಕುಕ್ಕರಹಳ್ಳಿಕೆರೆ
ಕುಕ್ಕರಹಳ್ಳಿಕೆರೆ
Published on

ಪ್ರಮುಖ ಮುಖ್ಯಾಂಶಗಳು

  • ನೀರನ್ನು ತಾವು ಕುಕ್ಕರಹಳ್ಳಿಕೆರೆಗೆ ಹರಿಸದೇ ಇದ್ದರೆ ಕೆರೆಯ ನೀರಿನಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಜಲಚರಗಳು ಬದುಕಲಾರವು
ಮೈಸೂರು: ಬೇಸಿಗೆಯಲ್ಲಿ ನೀಲಿ, ಹಸಿರು ಪಾಚಿ ಹೆಚ್ಚು ಬೆಳೆದು ಕುಕ್ಕರಹಳ್ಳಿಕೆರೆ ಅಂಚಿಗೆ ಸೇರಿ ದುರ್ವಾಸನೆ ಬರುವುದರಿಂದ ವಾಣಿ ವಿಲಾಸ ನೀರು ಸರಬರಾಜು ಕೇಂದ್ರದಿಂದ ನಿತ್ಯ 10 ಲಕ್ಷ ಲೀಟರ್ ನೀರು 2008ರಿಂದಲೂ ಹರಿಯುತ್ತಿರುವುದನ್ನು ನಿಲ್ಲಿಸದಿರಲು ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ ಡಾ. ಕೆ.ಎಂ.ಜಯರಾಮಯ್ಯ ಆಗ್ರಹಿಸಿದ್ದಾರೆ.
ಕುಕ್ಕರಹಳ್ಳಿಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಒಳಚರಂಡಿ ಸಂಸ್ಕರಣಾ ಘಟಕಕ್ಕೆ (ಎಸ್‌ಟಿಪಿ) ತಿರುಗಿಸಬೇಕೆಂದು 2003ರಲ್ಲಿ ಆಗ್ರಹಿಸಲಾಗಿತ್ತು. 
2004ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಟದ ಮೈದಾನದಲ್ಲಿ ಬಿದ್ದ ಮಳೆ ನೀರನ್ನು ಕುಕ್ಕರಹಳ್ಳಿಕೆರೆಗೆ ಹರಿಯುವಂತೆ ಮಾಡಲಾಯಿತು. ಹಾಗೆಯೇ 2008ರಲ್ಲಿ ವಾಣಿವಿಲಾಸ ಸರಬರಾಜು ಕೇಂದ್ರದ ಬ್ಯಾಕ್‌ವಾಶ್ ನೀರನ್ನು ಕುಕ್ಕರಹಳ್ಳಿಕೆರೆಗೆ ಹರಿಯುವಂತೆ ಕಾಮಗಾರಿ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಣಿವಿಲಾಸ ಕಾರ್ಯಾಗಾರದ ಬ್ಯಾಕ್‌ವಾಶ್ ನೀರನ್ನು ಕುಕ್ಕರಹಳ್ಳಿಕೆರೆಗೆ ಹರಿಸಲು ಸಂಬಂಧಿಸಿದವರಿಗೆ ತಿಳಿಸಬೇಕು. ಬೇಸಿಗೆಯಲ್ಲಿ ಕುಕ್ಕರಹಳ್ಳಿಕೆರೆಗೆ ಈ ಬ್ಯಾಕ್‌ವಾಶ್ ನೀರು ಬರದಿದ್ದರೆ ನೀಲಿ, ಹಸಿರು ಪಾಚಿ (ಮೈಕ್ರೋಸಿಸ್ಟೀಸ್ ಎರಿಜೋನಸ) ಯಥೇಚ್ಛವಾಗಿ ಬೆಳೆದು ಕೆರೆ ಅಂಚಿಗೆ ಸೇರಿ ಅದಕ್ಕೆ ಸಾಕಷ್ಟು ಆಹಾರ ಇಲ್ಲವಾಗಿ ಅದು ಸತ್ತು ಹೋಗಿ ದುರ್ವಾಸನೆ ಬರುತ್ತದೆ.
 ಜತೆಗೆ ಕೆರೆಯ ಅಂಚಿಗೆ ಹೋದ ಮೀನುಗಳು ಮೈಕ್ರೋಸಿಸ್ಟಿನ್ ಎಂಬ ವಿಷ ವಸ್ತುವಿನಿಂದ ಸತ್ತುಹೋಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರತಿ ಲೀಟರ್ ನೀರಿಗೆ 5 ರಿಂದ 6 ಮಿ.ಗ್ರಾಂ ಆಮ್ಲಜನಕ ಇರಬೇಕು. ಈ ಆಮ್ಲಜನಕ ಪ್ರಮಾಣ 3 ಮಿ.ಗ್ರಾಂ.ಗೆ ಇಳಿದರೆ ಮೀನು ಮತ್ತು ಇತರ ಜಲಚರಗಳು ಬದುಕಲಾರವು. 
ಈ ಬ್ಯಾಕ್‌ವಾಶ್ ನೀರನ್ನು ತಾವು ಕುಕ್ಕರಹಳ್ಳಿಕೆರೆಗೆ ಹರಿಸದೇ ಇದ್ದರೆ ಕೆರೆಯ ನೀರಿನಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿ ಜಲಚರಗಳು ಬದುಕಲಾರವು. ಆಗ ಕೆರೆ ವಾಸನೆ ಬರುತ್ತಿದೆ. ಸತ್ತು ಹೋಗಿರುವ ಮೀನು ತೇಲುತ್ತಿವೆ ಎಂದು ಎಚ್ಚರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net