ಮೀಸಲಾತಿ ಪ್ರಮಾಣ ಶೇ.65ಕ್ಕೆ ಹೆಚ್ಚಿಸಲು ಆಗ್ರಹ

ಮೈಸೂರು ನಗರದ ರಾಮಕೃಷ್ಣನಗರ ನೃಪತುಂಗ ಕನ್ನಡ ಶಾಲೆಂು ರವಾಗೋವಿಂದ ರಂಗಮಂದಿರದಲ್ಲಿ ಮಂಗಳವಾರ ‘ಒಳ ಮೀಸಲಾತಿ ಬಿಕ್ಕಟ್ಟು ಮತ್ತು ಪರಿಹಾರಗಳು’ ವಿಷಯದ ಕುರಿತು ಆಯೋಜಿಸಿದ್ದ ಸಭೆಯನ್ನು ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಏಕತಾರಿ ನುಡಿಸುವ ಮೂಲಕ ಉದ್ಘಾಟಿಸಿದರು. ಡಾ.ಹರೀಶ್ ಕುಮಾರ್, ದು.ಸರಸ್ವತಿ, ಚಂದ್ರು ತರಹುಣಿಸೆ, ಈ.ಧನಂಜಯ ಎಲಿಯೂರು ಹಾಗೂ ಇತರರು ಇದ್ದರು.
ಮೈಸೂರು ನಗರದ ರಾಮಕೃಷ್ಣನಗರ ನೃಪತುಂಗ ಕನ್ನಡ ಶಾಲೆಂು ರವಾಗೋವಿಂದ ರಂಗಮಂದಿರದಲ್ಲಿ ಮಂಗಳವಾರ ‘ಒಳ ಮೀಸಲಾತಿ ಬಿಕ್ಕಟ್ಟು ಮತ್ತು ಪರಿಹಾರಗಳು’ ವಿಷಯದ ಕುರಿತು ಆಯೋಜಿಸಿದ್ದ ಸಭೆಯನ್ನು ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಏಕತಾರಿ ನುಡಿಸುವ ಮೂಲಕ ಉದ್ಘಾಟಿಸಿದರು. ಡಾ.ಹರೀಶ್ ಕುಮಾರ್, ದು.ಸರಸ್ವತಿ, ಚಂದ್ರು ತರಹುಣಿಸೆ, ಈ.ಧನಂಜಯ ಎಲಿಯೂರು ಹಾಗೂ ಇತರರು ಇದ್ದರು.
Published on
ಮೈಸೂರು: ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಪ್ರಮಾಣವನ್ನು ಶೇ.56 ರಿಂದ ಶೇ.65ಕ್ಕೆ ಹೆಚ್ಚಿಸುವ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಹೋರಾಟ ನಡೆಸಬೇಕು ಎಂದು ದಲಿತ ಸಂಘರ್ಷ ಸಮಿತಿ ಹೋರಾಟಗಾರ್ತಿ ಇಂದಿರಾ ಕೃಷ್ಣಪ್ಪ ಕರೆ ನೀಡಿದರು.
ನಗರದ ರಾಮಕೃಷ್ಣನಗರ ನೃಪತುಂಗ ಕನ್ನಡ ಶಾಲೆಂು ರವಾಗೋವಿಂದ ರಂಗಮಂದಿರದಲ್ಲಿ ಒಂದಾಗೋಣ ಕೈಜೋಡಿಸಿ ಸಂಘಟನೆಯ ವತಿಯಿಂದ ಮಂಗಳವಾರ ‘ಒಳ ಮೀಸಲಾತಿ ಬಿಕ್ಕಟ್ಟು ಮತ್ತು ಪರಿಹಾರಗಳು’ ವಿಷಯದ ಕುರಿತು ಆಯೋಜಿಸಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಮೀಸಲಾತಿ ಪ್ರಮಾಣ ಹೆಚ್ಚಳದಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಈ ಕುರಿತು ಸರ್ಕಾರ ಮನಸ್ಸು ಮಾಡಬೇಕು ಎಂದರು.
ಒಳಮೀಸಲಾತಿ ವಿಚಾರವಾಗಿ ನಿವೃತ್ತ ನ್ಯಾಂುಮೂರ್ತಿ ನಾಗಮೋಹನ್ ದಾಸ್ ಅವರನ್ನು ಕೆಟ್ಟ ಪದಗಳಲ್ಲಿ ನಿಂದಿಸುವುದು ಸರಿಯಲ್ಲ. ಕೆಟ್ಟ ಭಾಷೆ ಬಳಸುವುದನ್ನು ಬಿಟ್ಟು ಸಮುದಾಯದ ಸ್ಥಿತಿಗತಿ, ಇತಿಹಾಸ, ಪುರಾತತ್ವದ ದಾಖಲೆ, ಜನಗಣತಿ ದತ್ತಾಂಶ ಆಧರಿಸಿ ಂಾವ ಜಾತಿಗೆ ಂಾವ ಪ್ರಾತಿನಿಧ್ಯ ಸಿಗಬೇಕು ಎಂಬುದನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
ರಾಜ್ಯದಲ್ಲಿ ಕಂಡುಕೊಳ್ಳುವ ಒಳಮೀಸಲಾತಿಂು ಸೌಹಾರ್ದ ಪರಿಹಾರ ಸೂತ್ರವು ರಾಷ್ಟ್ರಕ್ಕೆ ವಾದರಿ ಆಗಬೇಕು. ಅದರ ಜವಾಬ್ದಾರಿ ಎಲ್ಲರದ್ದಾಗಿದೆ. ಹೀಗಾಗಿ ಹೊಲೆಯ-ಮಾದಿಗರನ್ನು ಒಟ್ಟುಗೂಡಿಸಿ ಒಳ ಮೀಸಲಾತಿ ಅನುಷ್ಠಾನದ ಪರಿಹಾರಕ್ಕೆ ಕೂಡಲೇ ಸಮಿತಿ ರಚಿಸಿ ಸರ್ಕಾರಕ್ಕೆ ಸಲ್ಲಿಸುವ ಕೆಲಸ ವಾಡಬೇಕು. ಸರ್ಕಾರವು ಂಾರಿಗೂ ಅನ್ಯಾಂುವಾಗದಂತೆ, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾವಾಜಿಕ ನ್ಯಾಂು ನೀಡಬೇಕು ಎಂದರು.
ಕರ್ನಾಟಕ ರಾಜ್ಯ ಮಾಹಿತಿ ಹಕ್ಕುಗಳ ಆಯೋಗದ ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ಹೊಲೆಯ-ಮಾದಿಗ ಸಮುದಾಯಗಳು ಮಾನವೀಯ ನೆಲೆಗಟ್ಟಿನಲ್ಲಿ ಪ್ರವರ್ಗ ‘ಎ’ಗೆ ಪೌರಕಾರ್ಮಿಕ ಸಮುದಾಯವನ್ನು ಸೇರಿಸಿ ರೋಸ್ಟರ್ ಬಿಂದುವಿನಲ್ಲಿ ಮೊದಲ ಸ್ಥಾನ ಕೊಟ್ಟಿದ್ದರೆ ಒಳ ಮೀಸಲಾತಿಗೆ ನೈಜ ಅರ್ಥ ಬರುತಿತ್ತು ಎಂದು ಅಭಿಪ್ರಾಯಪಟ್ಟರು.
ದಲಿತ ಸಮುದಾಯದ ಸಮಗ್ರ ದೃಷ್ಟಿಕೋನದಿಂದ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಒಳ ಮೀಸಲಾತಿ ಅನ್ವಯಿಸಬೇಕಿತ್ತು. ಆದರೆ, ರಾಜಕೀಯ ವಿಷಯವಾಗಿ ಚರ್ಚೆಯಾಗಿರುವುದು ದುರಂತ. ರಾಜಕೀಯ ಲಾಭ-ನಷ್ಟದ ಲೆಕ್ಕಚಾರಕ್ಕಿಡಾಗಿರುವುದೆ ಗೊಂದಲಕ್ಕೆ ಕಾರಣವಾಗಿದೆ ಎಂದರು ಹೇಳಿದರು.
ಹಿರಿಯ ಸಾಹಿತಿ ದು.ಸರಸ್ವತಿ, ಚಿಂತಕ ಚಂದ್ರು ತರಹುಣಿಸೆ, ಪ್ರಗತಿಪರ ಚಿಂತಕ ಈ.ಧನಂಜಯ ಎಲಿಯೂರು, ಎಪಿಎಂಸಿ ಮಾಜಿ ಉಪಾಧ್ಯಕ್ಷ ಅಹಿಂದ ಜವರಪ್ಪ, ಪ್ರಮುಖರಾದ ಉಗ್ರನರಸಿಂಗೇಗೌಡ, ಬೆಟ್ಟಯ್ಯ ಕೋಟೆ, ನೆಲೆ ಹಿನ್ನೆಲೆ ಗೋಪಾಲ್, ಗೊಳೂರು ನಾರಾಯಣಸ್ವಾಮಿ, ಮ.ಪು.ಪೂರ್ಣಾನಂದ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net