ತನ್ವೀರ್ ಸೇಠ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ

ಪ್ರತಿಭಟನಾ ಮೆರವಣಿಗೆ
ಪ್ರತಿಭಟನಾ ಮೆರವಣಿಗೆ
Published on

ಪ್ರಮುಖ ಮುಖ್ಯಾಂಶಗಳು

  • ಎಂಎನ್‌ಜಿಟಿ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘ ಧರಣಿ
ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಎಂಎನ್‌ಜಿಟಿ ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರ ಸಂಘ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ನಗರದ ಬನ್ನಿಮಂಟಪ ಜೋಡಿ ತೆಂಗಿನ ಮರದ ರಸ್ತೆಯಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ಆರಂಭಿಸಿದ ಅವರು, ಹೈವೇ ವೃತ್ತ, ಮಿಲೇನಿಯಂ ವೃತ್ತ, ಫೌಂಟನ್ ವೃತ್ತ, ಎಫ್‌ಟಿಎಸ್ ಸರ್ಕಲ್, ಮಹದೇವಪುರ ಮುಖ್ಯರಸ್ತೆ, ಟಿಪ್ಪು ಹೋಟೆಲ್ ಮಾರ್ಗ, ನಿಮ್ರಾ ಮಸೀದಿ, ಅಲ್‌ಬದರ್ ವೃತ್ತ, ಅಬ್ದುಲ್‌ವಾಹಿದ್ ಫಂಕ್ಷನ್ ಹಾಲ್, ಖೂಬಾ ಮಸೀದಿಯಿಂದ ಎಡಕ್ಕೆ ತಿರುಗಿ ಶಾಸಕ ತನ್ವೀರ್‌ಸೇಠ್ ಅವರ ಮನೆ ಬಳಿ ತಲುಪಿತು. ಬಳಿಕ ತನ್ವೀರ್‌ಸೇಠ್ ಅವರಿಗೆ ಬೆಂಬಲ ನೀಡಿ, ಸಚಿವ ಸ್ಥಾನ ಕೊಡದಿದ್ದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಿದರು.
ನರಸಿಂಹರಾಜ ಕ್ಷೇತ್ರದಿಂದ ಸತತ ಆರು ಬಾರಿ ಆಯ್ಕೆಯಾಗಿರುವ ತನ್ವೀರ್ ಸೇಠ್ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡದೆ ಇರುವುದು ಖಂಡನೀಯ. ಎರಡು ಬಾರಿ ಸಚಿವರಾಗಿ ಕೆಲಸ ಮಾಡಿರುವ ಅನುಭವ ಇದ್ದು, ಪಕ್ಷ ನಿಷ್ಠೆ ಹೊಂದಿದ್ದಾರೆ. ಪಕ್ಷದಲ್ಲಿ ಅನೇಕ ಬಾರಿ ಅನ್ಯಾಯಕ್ಕೆ ಒಳಗಾದರೂ ಸಹಿಸಿಕೊಂಡು ಬಂದಿರುವ ತನ್ವೀರ್ ಸೇಠ್‌ಗೆ ಈ ಬಾರಿ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡಲೇ ಆಗಿರುವ ಅನ್ಯಾಯ ಸರಿಪಡಿಸಬೇಕು. ಸಂಪುಟದಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಅಂಜುಮ್ ಪಾಷ, ಕಾರ್ಯದರ್ಶಿ ಅಬ್ದುಲ್ ಖಾದರ್, ಖಜಾಂಚಿ ಯೂಸುಫ್ ಖಾನ್, ಜಂಟಿ ಕಾರ್ಯದರ್ಶಿ ಮುರುಗೇಶ್, ಸಿಯಾಕ್ ಬೇಗ್, ಶಂಕರ್, ಗೌಸ್ ಷರೀಫ್, ರಾಚಪ್ಪಾಜಿ, ಸುಹೇಲ್ ಪಾಷ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net