ಕಬ್ಬಿಗೆ ಒಂದೇ ಕಂತಿನಲ್ಲಿ ಹೆಚ್ಚುವರಿ 100 ರೂ. ಪಾವತಿಗೆ ಆಗ್ರಹ
ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚುವರಿ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಆಗ್ರಹಿಸಿ ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಬ್ಬಿನ ಪ್ರತಿ ಟನ್ಗೆ 100 ರೂ. ಹೆಚ್ಚುವರಿ
ಕಬ್ಬಿನ ಎಫ್ಆರ್ಪಿ ಹಣ ಪಾವತಿ ಸಂದರ್ಭದಲ್ಲಿ ಒಂದೇ ಕಂತಿನಲ್ಲಿ ಈ ಹಣ ಪಾವತಿಸಲು ಕ್ರಮ
ಕಾಡಂಚಿನಲ್ಲಿ ಮೂವರು ರೈತರು ಹುಲಿ ದಾಳಿಯಿಂದ ಮೃತ
ಅರಣ್ಯ ಇಲಾಖೆಯವರ ನಿರ್ಲಕ್ಷೃತನ ಹಾಗೂ ಲೋಪದಿಂದ ಈ ಸಮಸ್ಯೆ ಸೃಷ್ಟಿ
ಮೈಸೂರು:ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚುವರಿ ಹಣವನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಪಂ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಗೆ ಆಗಮಿಸಿದ ಸಿಎಂಗೆ ರೈತ ಹೋರಾಟಗಾರರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ನಡೆದ ಚಳವಳಿ ಫಲವಾಗಿ ಎಫ್ಆರ್ಪಿ ದರದ ಮೇಲೆ ಕಾರ್ಖಾನೆಗಳಿಂದ ಹೆಚ್ಚುವರಿ 50 ರೂ ಹಾಗೂ ಸರ್ಕಾರದಿಂದ 50 ರೂ. ಕಬ್ಬು ಬೆಳೆಗಾರರಿಗೆ ನೀಡುವುದಾಗಿ ಘೋಷಣೆ ಮಾಡಿದ್ದೀರಿ. ಅಂದರೆ ಪ್ರತಿ ಟನ್ಗೆ 100 ರೂ. ಹೆಚ್ಚುವರಿ ಮಾಡಿದಂತಾಗಿದೆ. ಈ ಹಣವನ್ನು ಎರಡು ಕಂತಿನಲ್ಲಿ ಪಾವತಿಸಲು ತಿಳಿಸಲಾಗಿದೆ.
ಇದು ಸರಿಯಾದ ಕ್ರಮವಲ್ಲ. ರೈತರಿಗೂ ಅನುಕೂಲವಾಗಲ್ಲ. ಹೆಚ್ಚುವರಿ ಹಣವನ್ನು ಸಕ್ಕರೆ ಕಾರ್ಖಾನೆಗಳಿಂದ, ಸರ್ಕಾರದಿಂದ ಕಬ್ಬಿನ ಎಫ್ಆರ್ಪಿ ಹಣ ಪಾವತಿ ಸಂದರ್ಭದಲ್ಲಿ ಒಂದೇ ಕಂತಿನಲ್ಲಿ ಈ ಹಣ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕು. ಈಗಾಗಲೇ ಹೊರಡಿಸಿರುವ ಆದೇಶವನ್ನು ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ 20 ದಿನಗಳಿಂದ ಜಿಲ್ಲೆಯ ಕಾಡಂಚಿನಲ್ಲಿ ಮೂವರು ರೈತರು ಹುಲಿ ದಾಳಿಯಿಂದ ಮೃತಪಟ್ಟಿದ್ದಾರೆ. ಒಬ್ಬ ರೈತ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ರೈತರು ಭಯ ಭೀತರಾಗಿ ಜಮೀನಿಗೆ ಹೋಗಲು ಹಾಗೂ ಬೆಳೆದಿರುವ ಫಸಲು ಕಾಪಾಡಲು ಸಾಧ್ಯವಾಗುತ್ತಿಲ್ಲ. ಅರಣ್ಯ ಇಲಾಖೆಯವರ ನಿರ್ಲಕ್ಷೃತನ ಹಾಗೂ ಲೋಪದಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು