450 ಎಕರೆ ವಿಸ್ತೀರ್ಣ ಹೊಂದಿರುವ ಈ ಕಾರ್ಖಾನೆಯ ಆವರಣದಲ್ಲಿ ಶೇ. 50 ಕ್ಕಿಂತ ಹೆಚ್ಚು ಹಸಿರು ಹೊದಿಕೆ ಇದೆ. ಇಲ್ಲಿ ಕಾರ್ಮಿಕರು, ಸಿಬ್ಬಂದಿ ಮತ್ತು ಅಧಿಕಾರಿಗಳು ಸೇರಿ ಒಟ್ಟು 1,890 ಜನರು ಕೆಲಸ ಮಾಡುತ್ತಿದ್ದಾರೆ. ಈಗಿರುವ ಆರೋಗ್ಯ ಕೇಂದ್ರ ತುಂಬಾ ಚಿಕ್ಕದಿದ್ದು ಇನ್ನೊಂದು ಆರೋಗ್ಯ ಕೇಂದ್ರದ ಅಗತ್ಯವಿದೆ ಎಂದು ಐಎಸ್‌ಓ 45001 ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತಾ ಪ್ರಮಾಣೀಕರಣ ಸಂಸ್ಥೆ ತಿಳಿಸಿದೆ.