ವಿದ್ಯಾ ವಿಕಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಾಂಸ್ಕೃತಿಕ ಸಂಭ್ರಮ

ವಿದ್ಯಾ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಪ್ರದರ್ಶನ.
ವಿದ್ಯಾ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ನೃತ್ಯ ಪ್ರದರ್ಶನ.
Published on

ಪ್ರಮುಖ ಮುಖ್ಯಾಂಶಗಳು

  • ರೋಚಕ ಆಟೋ ಎಕ್ಸ್‌ಪೋ ಕಾರ್ಯಕ್ರಮ
  • ಅತ್ಯಾಧುನಿಕ ಸೂಪರ್ ಕಾರುಗಳು ವಾಹನ ಪ್ರಿಯರಲ್ಲಿ ಹೊಸ ಸಂಚಲನ
ಮೈಸೂರು: ವಿದ್ಯಾ ವಿಕಾಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನಲ್ಲಿ  ವಾರ್ಷಿಕ ಕಲಾ ಮತ್ತು ಸಾಂಸ್ಕೃತಿಕ ಸಂಭ್ರಮವಾದ ‘ಗ್ರಾವ್ವಿಯೇಟಿ 2ಕೆ-26’ ಇತ್ತೀಚೆಗೆ ಆಚರಿಸಲಾಯಿತು. 
ವಿದ್ಯಾರ್ಥಿಗಳ ಪ್ರತಿಭೆ, ಸೃಜನಶೀಲತೆ ಮತ್ತು ಸಾಂಸ್ಕೃತಿಕ ಮೌಲ್ಯ ಅನಾವರಣಗೊಳಿಸಿದ ಈ ಎರಡು ದಿನಗಳ ಕಾರ್ಯಕ್ರಮವು ನವೀನತೆಯ ಸೊಗಸಾದ ಸಂಗಮಕ್ಕೆ ಸಾಕ್ಷಿಯಾಯಿತು.
ಉತ್ಸವದ ಮೊದಲ ದಿನವಾದ ನಡೆದ ರೋಚಕ ಆಟೋ ಎಕ್ಸ್‌ಪೋ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು. ಕಾಲೇಜು ಆವರಣದಲ್ಲಿ ಪ್ರದರ್ಶನಗೊಂಡ ಅತ್ಯಾಧುನಿಕ ಸೂಪರ್ ಕಾರುಗಳು ವಾಹನ ಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದವು. 
ವಾಹನಗಳ ಮಾಲೀಕರು ಅವುಗಳ ತಾಂತ್ರಿಕ ವಿಶೇಷತೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ವಿದ್ಯಾರ್ಥಿಗಳಿಗೆ ಕುತೂಹಲಕಾರಿಯಾಗಿತ್ತು. ಅದೇ ದಿನದ ಉತ್ತರಾರ್ಧದಲ್ಲಿ ನಡೆದ ಪಾರಂಪರಿಕ ದಿನಾಚರಣೆಯಲ್ಲಿ ವಿದ್ಯಾರ್ಥಿಗಳು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿ ಕ್ಯಾಂಪಸ್‌ನಲ್ಲಿ ಸಾಂಸ್ಕೃತಿಕ ಸೊಬಗನ್ನು ಹೆಚ್ಚಿಸಿದರು.
 ಉತ್ಸವದ ಪ್ರಮುಖ ಆಕರ್ಷಣೆಯಾದ ಸಾಂಸ್ಕೃತಿಕ ಸಂಜೆ ಭರ್ಜರಿಯಾಗಿ ಜರುಗಿತು. ವಿದ್ಯಾರ್ಥಿಗಳಿಂದ ಮೂಡಿಬಂದ ವೈವಿಧ್ಯಮಯ ನೃತ್ಯ ಪ್ರದರ್ಶನಗಳು, ಸಂಗೀತ ಸುಧೆ ಮತ್ತು ಕಲಾ ಪ್ರದರ್ಶನಗಳು ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದವು. 
ವಾರ್ಷಿಕ ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಗೌರವಿಸಲಾಯಿತು. ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸುವ ಮೂಲಕ ಈ ಸಮಾರಂಭ ಮುಕ್ತಾಯಗೊಂಡಿತು.   
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net