ಆಚಾರವಿಚಾರ ರೂಡಿಸಿಕೊಳ್ಳುವುದೇ ದೊಡ್ಡ ತಪಸ್ಸು

ಅಖಿಲ ಭಾರತ ಮಾಧ್ವ ಮಹಾ ಮಂಡಲ ಮೈಸೂರು ಶಾಖೆ ವತಿಯಿಂದ ಕೆ.ಆರ್.ವನಂನಲ್ಲಿ ನೂತನವಾಗಿ ನಿರ್ಮಿಸಿರುವ ‘ಸುಮಧ್ವ ಸಭಾ ಭವನ’ವನ್ನು ಸೋಮವಾರ ಗಣ್ಯರು ಉದ್ಘಾಟಿಸಿದರು. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಿ.ಜಿ.ಸತ್ಯಪ್ರಕಾಶ್, ಆರ್.ಸುಬ್ರಹ್ಮಣ್ಯ ತಂತ್ರಿ, ಆರ್.ವಾಸುದೇವ ಭಟ್, ಪಿ.ವಿ.ನಾಗೇಶ್, ಜಯರಾಮ್ ಭಟ್, ಎಂ.ಕೆ.ಪುರಾಣಿಕ್, ಸುಧೀರ್ ಆಚಾರ್ಯ ಇತರರಿದ್ದರು.
ಅಖಿಲ ಭಾರತ ಮಾಧ್ವ ಮಹಾ ಮಂಡಲ ಮೈಸೂರು ಶಾಖೆ ವತಿಯಿಂದ ಕೆ.ಆರ್.ವನಂನಲ್ಲಿ ನೂತನವಾಗಿ ನಿರ್ಮಿಸಿರುವ ‘ಸುಮಧ್ವ ಸಭಾ ಭವನ’ವನ್ನು ಸೋಮವಾರ ಗಣ್ಯರು ಉದ್ಘಾಟಿಸಿದರು. ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಿ.ಜಿ.ಸತ್ಯಪ್ರಕಾಶ್, ಆರ್.ಸುಬ್ರಹ್ಮಣ್ಯ ತಂತ್ರಿ, ಆರ್.ವಾಸುದೇವ ಭಟ್, ಪಿ.ವಿ.ನಾಗೇಶ್, ಜಯರಾಮ್ ಭಟ್, ಎಂ.ಕೆ.ಪುರಾಣಿಕ್, ಸುಧೀರ್ ಆಚಾರ್ಯ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಮತ
ಮೈಸೂರು: ಜೀವನದಲ್ಲಿ ಅವಶ್ಯಕವಾಗಿ ಬೇಕಾದ ನೀತಿ, ನಿಯಮ ಮತ್ತು ಆಚಾರವನ್ನು ಪ್ರತಿಯೊಬ್ಬರೂ ರೂಡಿಸಿಕೊಳ್ಳುವುದೇ ದೊಡ್ಡ ತಪಸ್ಸು ಎಂದು ಶ್ರೀ ಅಧೋಕ್ಷಜ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಅಖಿಲ ಭಾರತ ಮಾಧ್ವ ಮಹಾ ಮಂಡಲ ಮೈಸೂರು ಶಾಖೆ ವತಿಯಿಂದ ಕೆ.ಆರ್.ವನಂನಲ್ಲಿ ನೂತನವಾಗಿ ನಿರ್ಮಿಸಿರುವ ಸುಸಜ್ಜಿತ ‘ಸುಮಧ್ವ ಸಭಾ ಭವನ’ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ನಮ್ಮ ಗುರುಗಳ ಹೆಸರನ್ನು ಹೇಳುವ ಯೋಗ್ಯತೆ ಬರಬೇಕು ಎಂದರೆ ನಾವು ತಪಸ್ಸು ಮಾಡಬೇಕು. ಅವರು ಮಾಡಿದ ತಪಸ್ಸಿನ ಕಾರಣ ಇಂದಿಗೂ ಗುರುಗಳನ್ನು ನೆನಪು ಮಾಡಿಕೊಳ್ಳುತ್ತಿದ್ದೇವೆ. ಅವರು ಹಾಕಿಕೊಟ್ಟ ಜೀವನ ಪದ್ಧತಿ, ಆಚಾರ, ವಿಚಾರ, ಗಾಯತ್ರಿ ಮಂತ್ರದ ಅನುಷ್ಠಾನ, ದೇವತಾ ಪೂಜೆ, ಪರಿಶುದ್ಧವಾದ ಆಹಾರ ಸ್ವೀಕಾರ ಸೇರಿ ಜೀವನದಲ್ಲಿ ಅವಶ್ಯವಾಗಿ ಬೇಕಾದ ನೀತಿ ನಿಯಮಗಳನ್ನು ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೈಸೂರು ಶೈಕ್ಷಣಿಕ ನಗರಿಯೂ ಹೌದು. ದೂರದ ಊರುಗಳಿಂದ ಶಿಕ್ಷಣಕ್ಕೆ ಬರುವ ವಿದ್ಯಾರ್ಥಿಗಳ ಧಾರ್ಮಿಕ ಮತ್ತು ಸಾಮಾಜಿಕ ಬದುಕು ಸುಂದರವಾಗಲಿ ಎಂದು ನಮ್ಮ ಗುರುಗಳು ವಿದ್ಯಾರ್ಥಿ ನಿಲಯವನ್ನು ಸ್ಥಾಪನೆ ಮಾಡಿದ್ದರು. ಸದರಿ ವಿದ್ಯಾರ್ಥಿ ನಿಲಯದಲ್ಲಿ ಓದಿದ ನೂರಾರು ವಿದ್ಯಾರ್ಥಿಗಳು ಇಂದು ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ. ಕಾಲ ಕಾಲಕ್ಕೆ ಕಟ್ಟಡದ ಜೀರ್ಣೋದ್ಧಾರ ಆಗಬೇಕಿದೆ. ವಿದ್ಯಾರ್ಥಿ ನಿಲಯಕ್ಕೆ ಪುನಶ್ಚೇತನ ನೀಡುವಂತ ಪ್ರಸಂಗ ಬಂದಿದೆ. ಶಿಥಿಲವಾದ ಕಟ್ಟಡದಲ್ಲಿ ಯಾವುದೇ ಅನಾಹುತಗಳು ಸಂಭವಿಸಬಾರದು ಎಂದು ಜೀರ್ಣೋದ್ಧಾರ ಮಾಡಬೇಕಿದ್ದು, ಈ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಈ ಸಂಸ್ಥೆಯಲ್ಲಿ ಓದಿ ಹೋಗಿರುವ ವಿದ್ಯಾರ್ಥಿಗಳು ಸಹಕರಿಸುತ್ತಿದ್ದಾರೆ. ಗುರುಗಳ ಜನ್ಮ ಶತಾಬ್ದಿ ಉತ್ಸವ ಇನ್ನೂ 5 ವರ್ಷದಲ್ಲಿ ಬರುತ್ತಿದೆ. ಅವರ ಫೋಟೋ ಹಿಡಿದು ಮೆರವಣಿಗೆ ಮಾಡುವ ಮೂಲಕ ಅವರಿಗೆ ಜೈಕಾರ ಹಾಕಿದರೆ ಗುರುಗಳು ಮೆಚ್ಚುವುದಿಲ್ಲ. ಬದಲಿಗೆ ಅವರ ಸಾಮಾಜಿಕ ಕಳಕಳಿಗೆ ಅನುಗುಣವಾಗಿ ಅವರು ನಿರ್ಮಿಸಿರುವ ಸಂಸ್ಥೆಗಳನ್ನು ನಾವು ಸದೃಢಗೊಳಿಸಿದರೆ ಗುರುಗಳ ಜನ್ಮ ಶತಾಬ್ದಿ ಉತ್ಸವಕ್ಕೆ ಒಂದು ಅರ್ಥ ಬರುತ್ತದೆ. ಆಗ ಗುರುಗಳು ಸಂತೃಪ್ತರಾಗುತ್ತಾರೆ ಎಂದರು.
ಸದರಿ ಕಾರ್ಯಕ್ಕೆ ಅಖಿಲ ಭಾರತ ಮಾಧ್ವ ಮಾಹಾ ಮಂಡಲ ಮೈಸೂರು ಶಾಖೆ ವತಿಯಿಂದ 10 ಲಕ್ಷ ರೂ. ನೀಡಿದ್ದಾರೆ ಎಂದರು. ಮಂಡಲದ ಅಧ್ಯಕ್ಷ ಪಿ.ಜಿ.ಸತ್ಯಪ್ರಕಾಶ್, ಕಾರ್ಯದರ್ಶಿ ಆರ್.ಸುಬ್ರಹ್ಮಣ್ಯ ತಂತ್ರಿ, ಮುಖಂಡರಾದ ಆರ್.ವಾಸುದೇವ ಭಟ್, ಪಿ.ವಿ.ನಾಗೇಶ್, ಜಯರಾಮ್ ಭಟ್, ಎಂ.ಕೆ.ಪುರಾಣಿಕ್, ಸುಧೀರ್ ಆಚಾರ್ಯ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net