ಅಡ್ಡಮತದಾನ ಆಘಾತವೇನು ತಂದಿಲ್ಲ: ಎಚ್.ಡಿ.ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಯಾರ‌್ಯಾರು ಅಡ್ಡ ಮತದಾನ ಮಾಡಿದರೆ ಎಂಬ ಬಗ್ಗೆ ಮಾಹಿತಿ ಇದೆ.
  • ಯಾವ್ಯಾವ ಕಾರಣಕ್ಕೆ ಅವರು ಹೀಗೆ ಮಾಡಿದ್ದಾರೆ ಎಂಬುದೂ ತಿಳಿದಿದೆ
ಮೈಸೂರು: ಪಕ್ಷ ಬಿಡುವ ಚರ್ಚೆಯ ಹಂತದ ವರೆಗೂ ಅವರೆಲ್ಲ ಸಮಾಲೋಚನೆ ಮಾಡಿಯೇ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡಮತದಾನ ಮಾಡಿದ್ದು, ಹೋಗುವವರು ಎಲ್ಲ ಹೋಗಲಿ. ನನಗೆ ಪಕ್ಷ ಕಟ್ಟುವುದು ಗೊತ್ತಿದೆ ಎಂದು ಕೇಂದ್ರ ಸಚಿವ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಖಾರವಾಗಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರ ನಿಷ್ಠೆಯ ಪರೀಕ್ಷೆಗಾಗಿಯೇ ನಾನು ಅಭ್ಯರ್ಥಿ ಹಾಕಿದ್ದೆ. ಪಕ್ಷದಲ್ಲಿರುವ ಹಿತಶತ್ರುಗಳು ಯಾರು ಎಂಬುದನ್ನು ನಾನು ಪತ್ತೆ ಮಾಡಬೇಕಿತ್ತು. ಈಗ ಎಲ್ಲದಕ್ಕೂ ಉತ್ತರ ಸಿಕ್ಕಿದೆ. ಯಾರನ್ನು ಅತಿಯಾಗಿ ನಂಬಬಾರದು ಎಂಬ ಪಾಠವನ್ನೂ ಈ ಫಲಿತಾಂಶ ನನಗೆ ಕಲಿಸಿದೆ ಎಂದು ಬೇಸರದಿಂದ ಹೇಳಿದರು.
ಎಂಎಲ್‌ಸಿ ಚುನಾವಣೆಯಲ್ಲಿ ಅಡ್ಡಮತದಾನ ಆಘಾತವೇನು ತಂದಿಲ್ಲ. ಇದರ ನಿರೀಕ್ಷೆ ಇತ್ತು. ಯಾರ‌್ಯಾರು ಅಡ್ಡ ಮತದಾನ ಮಾಡಿದರೆ ಎಂಬ ಬಗ್ಗೆ ಮಾಹಿತಿ ಇದೆ. ಯಾವ್ಯಾವ ಕಾರಣಕ್ಕೆ ಅವರು ಹೀಗೆ ಮಾಡಿದ್ದಾರೆ ಎಂಬುದೂ ತಿಳಿದಿದೆ ಎಂದರು.
ಇಂತಹ ವಂಚನೆ, ಮೋಸಗಳು ನನಗೆ ಮತ್ತು ನಮ್ಮ ಪಕ್ಷಕ್ಕೆ ಹೊಸವಲ್ಲ. ಎಷ್ಟೋ ಸಲ ಎದುರಿಸಿ ಅದರಿಂದ ಆಚೆ ಬಂದಿದ್ದು, ಮುಂದಿನ ದಿನಗಳಲ್ಲಿ ಜೆನ್ ಜಿ ತಲೆಮಾರಿನ ಯುವಜನರಿಗೆ ಹೆಚ್ಚಿನ ಅವಕಾಶ ನೀಡಲಾಗುವುದು. ಹೊಸ ನಾಯಕತ್ವ ಬೆಳೆಸುವುದು ಗೊತ್ತಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net