ಶವ ಸಂಸ್ಕಾರಕ್ಕೆ ಸ್ಥಳ ನಿಗದಿ

ಬೈಲುಕುಪ್ಪೆ ಗ್ರಾಪಂ ವ್ಯಾಪ್ತಿಯ ದೊಡ್ಡ ಹರವೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಉಪ ತಹಸೀಲ್ದಾರ್ ಮಹೇಶ್, ಕಂದಾಯ ಇಲಾಖೆ ಭೂಮಾಪನ ಅಧಿಕಾರಿಗಳು ಹಾಗೂ ಪೊಲೀಸರು 30 ಕುಂಟೆ ಜಾಗವನ್ನು ಸಾರ್ವಜನಿಕರ ಸ್ಮಶಾನ ಎಂದು ಗುರುತಿಸಿದರು. ನಾರಾಯಣಸ್ವಾಮಿ, ಆನಂದ್, ನವೀನ್ ರಾವ್, ಮಹೇಶ್, ನಾರಾಯಣಸ್ವಾಮಿ ಇದ್ದರು

Published on
* ದೊಡ್ಡ ಹರವೆ ಗ್ರಾಮದಲ್ಲಿ ಸಮಸ್ಯೆ ಪರಿಹಾರ
* ಅಧಿಕಾರಿಗಳ ಭೇಟಿ
ಬೈಲುಕುಪ್ಪೆ:ಸಮೀಪದ ದೊಡ್ಡ ಹರವೆ ಗ್ರಾಮದಲ್ಲಿ ಮೃತಪಟ್ಟ ಮಹಿಳೆ ಶವ ಹೂಳಲು ಜಾಗ ನಿಗದಿ ಮಾಡುವ ಮೂಲಕ ಹಲವು ವರ್ಷಗಳಿಂದ ಕಾಡುತ್ತಿದ್ದ ಸ್ಮಶಾನ ಸಮಸ್ಯೆಗೆ ಅಧಿಕಾರಿಗಳು ಗುರುವಾರ ಪರಿಹಾರ ದೊರಕಿಸಿಕೊಟ್ಟಿದ್ದಾರೆ.
ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಸ್ಮಶಾನ ಸಮಸ್ಯೆ ತಾರಕಕ್ಕೆ ಏರಿತ್ತು. ಅಸಹಜ ಸಾವಿಗೀಡಾದ ಸುಶೀಲಮ್ಮ ಎಂಬಾಕೆ ಮೃತ ದೇಹ ಹೂಳಲು ಗ್ರಾಮಸ್ಥರು ಪರದಾಡುತ್ತಿದ್ದಾಗ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಸರ್ಕಾರಿ ಜಾಗದ ಸರ್ವೇ ಕಾರ್ಯ ನಡೆಸಿ ಸಾರ್ವಜನಿಕರ ಸ್ಮಶಾನ ಸ್ಥಳ ನಿಗದಿಗೊಳಿಸಿ ಸಮಸ್ಯೆ ನಿವಾರಿಸಿದರು. ಬೈಲುಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ದೊಡ್ಡ ಹರವೆ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ ಉಪ ತಹಸೀಲ್ದಾರ್ ಮಹೇಶ್, ಕಂದಾಯ ಇಲಾಖೆ ಭೂಮಾಪನ ಅಧಿಕಾರಿಗಳು ಹಾಗೂ ಪೊಲೀಸರು
ಸರ್ವೇ ನಂಬರ್ 1ರಲ್ಲಿ 30 ಕುಂಟೆ ಜಾಗವನ್ನು ಸಾರ್ವಜನಿಕರ ಸ್ಮಶಾನ ಎಂದು ಹದ್ದುಬಸ್ತು ನಿಗದಿ ಮಾಡಿದರು. ನಂತರ ಅಂತ್ಯ ಸಂಸ್ಕಾರ ಪ್ರಕ್ರಿಯೆ ನೆರವೇರಿತು. ತಾಲೂಕು ಭೂಮಾಪನ ಅಧಿಕಾರಿ ನಾರಾಯಣಸ್ವಾಮಿ, ಆರ್ ಐ ಆನಂದ್ ,ಗ್ರಾಮ ಆಡಳಿತ ಅಧಿಕಾರಿ ನವೀನ್ ರಾವ್, ಗ್ರಾಮದ ಮುಖಂಡರಾದ ರಾಜಯ್ಯ, ಸಣ್ಣಯ್ಯ, ಗೋವಿಂದಯ್ಯ,ಜವರಯ್ಯ, ಬಸವರಾಜು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net