ಸಹಕಾರ ಸಂಸ್ಥೆಗಳು ಸಮಾಜಮುಖಿ ಕಾರ್ಯ ಮಾಡಲಿ: ಎಚ್.ವಿ.ರಾಜೀವ್ ಮನವಿ

ಕರ್ನಾಟಕ ರಾಜ್ಯ ಸೌಹಾರ್ದ ಸಯುಕ್ತ ಸಹಕಾರ ನಿಯಮಿತದಿಂದ ನಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಎಚ್.ವಿ.ರಾಜೀವ್ ಉದ್ಘಾಟಿಸಿದರು. ಎಸ್.ಕೆ.ಮಂಜುನಾಥ್, ಎಸ್.ಎಂ.ಶಶಿರೇಖಾ, ಭಾಸ್ಕರ್ ಹೆಗಡೆ ಕಾಗೇರಿ, ಗುರುಪ್ರಸಾದ್ ಬಂಗೇರ, ಆರ್.ಎಸ್.ಸುರೇಶ, ಎನ್.ಬಲರಾಮ್ ಇತರರು ಇದ್ದರು.
ಕರ್ನಾಟಕ ರಾಜ್ಯ ಸೌಹಾರ್ದ ಸಯುಕ್ತ ಸಹಕಾರ ನಿಯಮಿತದಿಂದ ನಗರದಲ್ಲಿ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಎಚ್.ವಿ.ರಾಜೀವ್ ಉದ್ಘಾಟಿಸಿದರು. ಎಸ್.ಕೆ.ಮಂಜುನಾಥ್, ಎಸ್.ಎಂ.ಶಶಿರೇಖಾ, ಭಾಸ್ಕರ್ ಹೆಗಡೆ ಕಾಗೇರಿ, ಗುರುಪ್ರಸಾದ್ ಬಂಗೇರ, ಆರ್.ಎಸ್.ಸುರೇಶ, ಎನ್.ಬಲರಾಮ್ ಇತರರು ಇದ್ದರು.
Published on
ಮೈಸೂರು:ಸೌಹಾರ್ದ ಸಹಕಾರ ಸಂಸ್ಥೆಗಳು ತಮ್ಮ ಕಾರ್ಯಕ್ಷೇತ್ರದಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ ಮಾಜಿ ಅಧ್ಯಕ್ಷ ಹಾಗೂ ಶಿಕ್ಷಣ ನಿಧಿ ಸಲಹಾ ಸಮಿತಿ ಸದಸ್ಯ ಎಚ್.ವಿ.ರಾಜೀವ್ ಹೇಳಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತದಿಂದ ನಗರದ ಇಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಮೈಸೂರು, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯ 2024-25ನೇ ಸಾಲಿನಲ್ಲಿ ನಷ್ಟದಲ್ಲಿರುವ ಸೌಹಾರ್ದ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರ ವಿಷಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಸಂಘಗಳ ಸದಸ್ಯರು, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ನಡುವೆ ಉತ್ತಮ ಬಾಂಧವ್ಯ ಇರಬೇಕು. ಯಾವುದೇ ಸಮಸ್ಯೆ ಎದುರಾದಾಗ ಸಹಕಾರ ಇಲಾಖೆ ಗಮನಕ್ಕೆ ತಂದು ಪರಿಹರಿಸಿಕೊಂಡು ಸಂಘವನ್ನು ಸುಗಮವಾಗಿ ಮುನ್ನಡೆಸುವ ಕಡೆಗೆ ಪ್ರಥಮ ಆದ್ಯತೆ ನೀಡಿದರೆ ಯಾವ ಸಮಸ್ಯೆ ಆಗದು ಎಂದು ಸಲಹೆ ನೀಡಿದರು.
ಸಾಲ ಕೊಡುವಾಗ ಸಂಸ್ಥೆ ಅಧ್ಯಕ್ಷರು, ನಿರ್ದೇಶಕರು ಅತ್ಯಂತ ಜಾಗರೂಕರಾಗಿರಬೇಕು. ಪ್ರತಿಯೊಬ್ಬ ನಿರ್ದೇಶಕರೂ ಸಂಸ್ಥೆಯ ಎಲ್ಲ ಆಸ್ತಿಗಳ ಬಗ್ಗೆ ಪೂರ್ಣ ಮಾಹಿತಿ ಹೊಂದಿರಬೇಕು. ಸಂಸ್ಥೆ ಬೆಳವಣಿಗೆ, ನಿರ್ವಹಣೆ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರಬೇಕು. ಸಂಸ್ಥೆ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಗಳಾಗಬೇಕು ಎಂದರು.
ಮೈಸೂರಿನಲ್ಲಿ ಬಹುತೇಕ ಮೈಕ್ರೋ ಸಹಕಾರ ಸಂಸ್ಥೆಗಳಿದ್ದು, ಬಹಳ ಉತ್ಸಾಹದಿಂದ ಪ್ರಾರಂಭ ಮಾಡುತ್ತಾರೆ. ಕಡಿಮೆ ಬಂಡವಾಳದಲ್ಲಿ ಸಾಲ ಸೌಲಭ್ಯ ನೀಡುವುದರಿಂದ ಆರಂಭದಲ್ಲೇ ಮುಗ್ಗರಿಸುತ್ತಿವೆ. ಆದ್ದರಿಂದ ಮೊದಲು ಷೇರುದಾರರ ಸಂಖ್ಯೆ ಹೆಚ್ಚಿಸಬೇಕು. ಠೇವಣಿ ಸಂಗ್ರಹಿಸಬೇಕು. ಸಾಲ ವಸೂಲಿ ಇತ್ಯಾದಿ ಬಗ್ಗೆ ಸೂಕ್ಷ್ಮ್ಮವಾಗಿ ಯೋಚನೆ ಮಾಡಿ ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದರು.
ಸಹಕಾರ ಸಂಘಗಳನ್ನು ನಷ್ಟದಿಂದ ಪಾರು ಮಾಡಿ ಲಾಭದತ್ತ ನಡೆಸುವುದು ಅವಶ್ಯಕ. ನಷ್ಟದಿಂದ ಮೇಲೆ ಬಂದರೆ ಸ್ಥಾಪನೆ ಉದ್ದೇಶವನ್ನು ಈಡೇರಿಸಲು ಅನುಕೂಲವಾಗುತ್ತದೆ. ಆದ್ದರಿಂದ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದರು.
ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ.ಮಂಜುನಾಥ್, ಸಹಕಾರ ಸಂಘಗಳ ಲೆಕ್ಕ ಪರಿಶೋಧಕ ಜಂಟಿ ನಿರ್ದೇಶಕಿ ಎಸ್.ಎಂ.ಶಶಿರೇಖಾ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ ಮಾಜಿ ನಿರ್ದೇಶಕ ಭಾಸ್ಕರ್ ಹೆಗಡೆ ಕಾಗೇರಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರ ನಿಯಮಿತ ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರ, ಸೌಹಾರ್ದ ಅಭಿವೃದ್ಧಿ ಅಧಿಕಾರಿಗಳಾದ ಆರ್.ಎಸ್.ಸುರೇಶ, ಎನ್.ಬಲರಾಮ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net