ವಡ್ಡರಕೊಪ್ಪಲು ಡೇರಿ ಪುನಶ್ಚೇತನಕ್ಕೆ ಸಹಕಾರ

ತಿ.ನರಸಿಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಪುನರಾರಂಭಕ್ಕೆ ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ಆರ್ಥಿಕ ನೆರವು ನೀಡಿದರು. ಕೇತುಪುರ ಪ್ರಭಾಕರ್,ಆರ್.ಪ್ರಮೋದ್, ತಿಮ್ಮಮ್ಮ, ಪ್ರಭಾಕರ್, ಬಿ.ಚನ್ನಕೇಶವ ಇತರರು ಇದ್ದರು.
ತಿ.ನರಸಿಪುರ ತಾಲೂಕಿನ ವಡ್ಡರಕೊಪ್ಪಲು ಗ್ರಾಮದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಪುನರಾರಂಭಕ್ಕೆ ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ಆರ್ಥಿಕ ನೆರವು ನೀಡಿದರು. ಕೇತುಪುರ ಪ್ರಭಾಕರ್,ಆರ್.ಪ್ರಮೋದ್, ತಿಮ್ಮಮ್ಮ, ಪ್ರಭಾಕರ್, ಬಿ.ಚನ್ನಕೇಶವ ಇತರರು ಇದ್ದರು.
Published on
ತಿ.ನರಸೀಪುರ: ಹಾಲಿನ ಸಂಗ್ರಹ ಕುಸಿತ, ಆರ್ಥಿಕ ಸಂಕಷ್ಟ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದ ಮುಚ್ಚುವ
ಹಂತ ತಲುಪಿದ್ದ ತಾಲೂಕಿನ ವಡ್ಡರಕೊಪ್ಪಲು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮೈಮುಲ್ ಮಾಜಿ ಅಧ್ಯಕ್ಷ ಆರ್.ಚೆಲುವರಾಜು ವೈಯಕ್ತಿಕ ಅರ್ಥಿಕ ನೆರವು ನೀಡುವ ಮೂಲಕ ಸಂಘದ ಪುನಶ್ಚೇತನಕ್ಕೆ ಸಹಕರಿಸಿದ್ದಾರೆ.
ತಾಲೂಕಿನ ವಡ್ಡರಕೊಪ್ಪಲು ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ, ಸಂಘದ ಆಡಳಿತ ಮಂಡಳಿ, ಹಾಲು ಉತ್ಪಾದಕರು ಹಾಗೂ ಗ್ರಾಮಸ್ಥರೊಂದಿಗೆ ಚರ್ಚಿಸಿ ಬಳಿಕ ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ರೈತರು, ಹೈನುಗಾರರ ಬದುಕಿಗೆ ಆಸರೆಯಾಗಿರುವ ಸಹಕಾರ ಸಂಘಗಳು ಯಾವುದೇ ಕಾರಣಕ್ಕೂ ಮುಚ್ಚುವ ಪರಿಸ್ಥಿತಿಗೆ ಬರಬಾರದು. ಸಹಕಾರ ಸಂಸ್ಥೆಗಳು ಉಳಿದರೆ ಮಾತ್ರ ರೈತರ ಆರ್ಥಿಕ ಭದ್ರತೆ ಮತ್ತು ಹಾಲು ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಭಾಗದ ಹೈನುಗಾರರ ಅನುಕೂಲಕ್ಕಾಗಿ ಹಲವು ವರ್ಷಗಳ ಹಿಂದೆ ಈ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲಾಗಿತ್ತು. ಸಾವಿರಾರು ಲೀ. ಹಾಲು ಸಂಗ್ರಹಿಸುವ ಮೂಲಕ ಹೈನುಗಾರರಿಗೆ ಆರ್ಥಿಕ ಭದ್ರತೆ ಒದಗಿಸುತ್ತಿದ್ದ ಈ ಸಂಘ, ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿದೆ. ಆಡಳಿತಾತ್ಮಕ ವೈಫಲ್ಯ, ಖರೀದಿಸಿದ ಹಾಲಿನ ಹಣ ಪಾವತಿ ವಿಳಂಬ ಹಾಗೂ ಕೆಲ ತಾಂತ್ರಿಕ ಸಮಸ್ಯೆಗಳ ಪರಿಣಾಮ ಹೈನುಗಾರರು ಖಾಸಗಿ ಡೇರಿಗಳತ್ತ ಮುಖ ಮಾಡಿದ್ದಾರೆ. ಇದರಿಂದ ಸಂಘದ ಹಾಲಿನ ಸಂಗ್ರಹ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮ ಸಂಘವನ್ನು ಮುಚ್ಚುವ ಸ್ಥಿತಿ ನಿರ್ಮಾಣವಾಗಿತ್ತು ಎಂದರು.
ಈ ವಿಚಾರವನ್ನು ಸಂಘದ ಪದಾಧಿಕಾರಿಗಳು ತಮ್ಮ ಗಮನಕ್ಕೆ ತಂದಿದ್ದರು. ಸಂಘವನ್ನು ಉಳಿಸಲು ನೆರವು ನೀಡು ವಂತೆ ಮನವಿ ಮಾಡಿದ್ದರು. ಹೈನುಗಾರರ ಹಿತದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಸಹಕಾರ ಸಂಘವೊಂದು ಕೇವಲ ಹಣದ ಕೊರತೆಯಿಂದ ಮುಚ್ಚಬಾರದು ಎಂಬ ಉದ್ದೇಶದಿಂದ ವೈಯಕ್ತಿಕವಾಗಿ ಆರ್ಥಿಕ ನೆರವು ನೀಡಿದ್ದೇನೆ ಎಂದು ಮಾಹಿತಿ ನೀಡಿದರು.
ಮೈಮುಲ್ ಮಾಜಿ ನಿರ್ದೇಶಕ ಕೇತುಪುರ ಪ್ರಭಾಕರ್, ಉಪವ್ಯವಸ್ಥಾಪಕ ಆರ್.ಪ್ರಮೋದ್, ಗ್ರಾಪಂ ಮಾಜಿ ಅಧ್ಯಕ್ಷೆ ತಿಮ್ಮಮ್ಮ, ಗುತ್ತಿಗೆದಾರ ಬಸವನಹಳ್ಳಿ ಮಹೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಚನ್ನಕೇಶವ, ಮುಖಂಡ ಯಾಚನಹಳ್ಳಿ ಅಶೋಕ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net