ಗೌಸಿಯಾನಗರ ‘ಸಿ’ ಬ್ಲಾಕ್ ಸುಲ್ತಾನ್ ರಸ್ತೆಯ ಸೈಯದ್ ಜಾಬೀರ್ ಅಲಿಯಾಸ್ ಜಾಬೀರ್ ಶಿಕ್ಷೆಗೆ ಗುರಿಯಾದ ಅಪರಾಧಿ.
5 ಕೆ.ಜಿ.400 ಗ್ರಾಂ ಗಾಂಜಾ ಪತ್ತೆ
ಮೈಸೂರು: ಗಾಂಜಾ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಅಪರಾಧಿಗೆ ನ್ಯಾಯಾಲಯ 4 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿದೆ.
ಗೌಸಿಯಾನಗರ ‘ಸಿ’ ಬ್ಲಾಕ್ ಸುಲ್ತಾನ್ ರಸ್ತೆಯ ಸೈಯದ್ ಜಾಬೀರ್ ಅಲಿಯಾಸ್ ಜಾಬೀರ್ ಶಿಕ್ಷೆಗೆ ಗುರಿಯಾದ ಅಪರಾಧಿ.
ಈತ 2022ರ ಸೆ.17ರಂದು ಸ್ಕೂಟರ್‌ನಲ್ಲಿ ಗಾಂಜಾ ಇಟ್ಟುಕೊಂಡು ಬಡಾವಣೆಯಲ್ಲಿ ಮಾರಾಟ ಮಾಡುತ್ತಿದ್ದಾನೆ ಎಂದು ಬಂದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಉದಯಗಿರಿ ಪೊಲೀಸರು, ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ 5 ಕೆ.ಜಿ.400 ಗ್ರಾಂ ಗಾಂಜಾ ಪತ್ತೆಯಾಗಿತ್ತು.
ಈತನ ವಿರುದ್ಧ ನರಗದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿ.ಎಚ್.ದಯಾನಂದ ಅವರು 4 ವರ್ಷ ಕಠಿಣ ಸಜೆ, 40 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎನ್.ವಿ.ವಿಜಯಲಕ್ಷ್ಮಿ ವಾದ ಮಂಡಿಸಿದ್ದರು.