ಗಾಂಜಾ ಸಾಗಣೆ, ಅಪರಾಧಿಗೆ 3 ವರ್ಷ ಕಠಿಣ ಶಿಕ್ಷೆ

ಅಪರಾಧ
ಅಪರಾಧ
Published on

ಪ್ರಮುಖ ಮುಖ್ಯಾಂಶಗಳು

  • ವಾಸದ ಮನೆಯಲ್ಲಿ ಗಾಂಜಾ ಗಿಡ ಬೆಳೆದು ಅವುಗಳನ್ನು ಕಿತ್ತು ನಿರ್ಜನ ಪ್ರದೇಶದಲ್ಲಿ ಒಣಗಿಸಿ ಮಾರಾಟ
  • ಪ್ರಕರಣ ದಾಖಲಿಸಿಕೊಂಡಿದ್ದ ಎನ್ ಆರ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ
ಮೈಸೂರು: ಗಾಂಜಾ ಸಾಗಿಸುತ್ತಿದ್ದ ಅಪರಾಧಿಗೆ ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ, 30 ಸಾವಿರ ರೂ. ದಂಡ ವಿಧಿಸಿ ನಗರದ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ನೀಡಿದೆ.
ಬೆಲವತ್ತ ಗ್ರಾಮದ ಸೈಯದ್ ಜಾಬೀರ್(38) ಶಿಕ್ಷೆಗೆ ಒಳಗಾದ ಅಪರಾಧಿ. 
ಈತ ತನ್ನ ವಾಸದ ಮನೆಯಲ್ಲಿ ಗಾಂಜಾ ಗಿಡ ಬೆಳೆದು ಅವುಗಳನ್ನು ಕಿತ್ತು ನಿರ್ಜನ ಪ್ರದೇಶದಲ್ಲಿ ಒಣಗಿಸಿ ಮಾರಾಟ ಮಾಡಲು ಮುಂದಾಗಿದ್ದ. ಈ ಸಂದರ್ಭದಲ್ಲಿ ಪೊಲೀಸರು ಮಾಲು ಸಮೇತ ಈತನನ್ನು ಬಂಧಿಸಿದ್ದರು.
 3.230 ಕೆಜಿ ಗಾಂಜಾ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಎನ್ ಆರ್ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಆರೋಪಪಟ್ಟಿ  ಸಲ್ಲಿಸಿದ್ದರು.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ.ರಮೇಶ್ ಈ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಎನ್.ಬಿ.ವಿಜಯಲಕ್ಷ್ಮೀ ಸರ್ಕಾರದ ಪರ ವಾದ ಮಂಡಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net