ಭೋವಿ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡಿ

ಮೈಸೂರಿನ ಸಂಸದರ ಕಚೇರಿಯಲ್ಲಿ ತಾಲೂಕು ಭೋವಿ ಸಮುದಾಯ ಅಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ವಿ.ಗಣೇಶ್ ಭೋವಿ, ಎಚ್.ವಿ.ಪರಮೇಶ್, ವಾಸು, ಸುನಿಲ್ ಇತರರಿದ್ದರು.
ಮೈಸೂರಿನ ಸಂಸದರ ಕಚೇರಿಯಲ್ಲಿ ತಾಲೂಕು ಭೋವಿ ಸಮುದಾಯ ಅಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ವಿ.ಗಣೇಶ್ ಭೋವಿ, ಎಚ್.ವಿ.ಪರಮೇಶ್, ವಾಸು, ಸುನಿಲ್ ಇತರರಿದ್ದರು.
Published on
ಹುಣಸೂರು: ತಾಲೂಕು ಭೋವಿ ಅಭಿವೃದ್ಧಿ ಟ್ರಸ್ಟ್‌ನ ಪದಾಧಿಕಾರಿಗಳು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಸಮುದಾಯದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.
ಶುಕ್ರವಾರ ಮೈಸೂರಿನ ಸಂಸದರ ಕಚೇರಿಯಲ್ಲಿ ಭೇಟಿ ಮಾಡಿದ ಟ್ರಸ್ಟ್‌ನ ಗೌರವಾಧ್ಯಕ್ಷ ವಿ.ಗಣೇಶ್ ಭೋವಿ ಮಾತನಾಡಿ, ಮೈಸೂರು ಅರಸರು ಈ ಭಾಗದ ಭೋವಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಅನನ್ಯ ಕೊಡುಗೆಗಳನ್ನು ನೀಡಿದ್ದಾರೆ. ಕನ್ನಂಬಾಡಿ ಕಟ್ಟೆ ನಿರ್ಮಾಣದಲ್ಲಿ ನಮ್ಮ ಸಮುದಾಯ ಪರಿಶ್ರಮದೊಂದಿಗೆ ಕಾರ್ಯನಿರ್ವಹಿಸಿದೆ. ಪ್ರತಿಫಲವಾಗಿ ಅಂದಿನ ದಿನಗಳಲ್ಲಿ ಮೀಸಲಾತಿ ನೀಡುವ ಮೂಲಕ ಭೋವಿ ಸಮಾಜದ ಏಳಿಗೆಗೆ ಮೈಸೂರು ಅರಸರು ಆದ್ಯತೆ ನೀಡಿದ್ದರು. ಇದೀಗ ಅದೇ ಯದುವಂಶದ ಕುಡಿ ನಮ್ಮ ಕ್ಷೇತ್ರದ ಸಂಸದರಾಗಿದ್ದು ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮನವಿ ಸಲ್ಲಿಸಲಾಗಿದೆ. ಸಮುದಾಯದ ಮನವಿಗೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಆದ್ಯತೆ ಮೇರೆಗೆ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು.
ಅಧ್ಯಕ್ಷ ವಾಸು, ಕಾರ್ಯಾಧ್ಯಕ್ಷ ಎಚ್.ವಿ.ಪರಮೇಶ್, ಪದಾಧಿಕಾರಿಗಳಾದ ಸುನಿಲ್, ಆಂಜನೇಯ, ಸ್ವಾಮಿ ಭೋವಿ, ಶ್ರೀನಿವಾಸಿ, ಅಶೋಕ, ಮೂಕನಹಳ್ಳಿ ಗಣೇಶ್, ಕುಚೇಲ, ಹನುಮಂತಪುರ ಸ್ವಾಮಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net