ಮುಂದುವರಿದ ತಂಬಾಕು ಮಾರುಕಟ್ಟೆ ಸ್ಥಗಿತ

ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ದರ ಕುಸಿತವನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು. ಮುಖಂಡರಾದ ಅಗ್ರಹಾರ ರಾಮೇಗೌಡ, ಅಗ್ರಹಾರ ನಂಜುಂಡೇಗೌಡ, ಸತೀಶ್, ಪ್ರಭಾಕರ್, ಸ್ವಾಮಿಗೌಡ, ಮಹದೇವ, ಶಂಕರ್ ಇತರರಿದ್ದರು.
ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ದರ ಕುಸಿತವನ್ನು ಖಂಡಿಸಿ ರೈತರು ಪ್ರತಿಭಟನೆ ನಡೆಸಿದರು. ಮುಖಂಡರಾದ ಅಗ್ರಹಾರ ರಾಮೇಗೌಡ, ಅಗ್ರಹಾರ ನಂಜುಂಡೇಗೌಡ, ಸತೀಶ್, ಪ್ರಭಾಕರ್, ಸ್ವಾಮಿಗೌಡ, ಮಹದೇವ, ಶಂಕರ್ ಇತರರಿದ್ದರು.
Published on
ಹುಣಸೂರು: ತಂಬಾಕಿನ ದರದಲ್ಲಿ ದಿಢೀರ್ ಕುಸಿತ ಕಂಡುಬಂದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ರೈತರು ಮಾರುಕಟ್ಟೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. 13 ದಿನಗಳವರೆಗೆ ತಂಬಾಕು ಖರೀದಿ ಕಂಪನಿಗಳು ನಡೆಸಿದ್ದ ಮಾರುಕಟ್ಟೆ ಬಂದ್ ತೆರವುಗೊಂಡ ನಂತರದ ಮೊದಲ ದಿನವೇ ಗುರುವಾರ ರೈತರ ಆಕ್ರೋಶದಿಂದಾಗಿ ಮಾರುಕಟ್ಟೆ ಮತ್ತೆ ಬಂದ್ ಆಯಿತು.
ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರ ದಿಢೀರ್ ಪ್ರತಿಭಟನೆ ನಡೆಯಿತು. ಮಾರುಕಟ್ಟೆಯ ಮುಖ್ಯದ್ವಾರಕ್ಕೆ ರೈತರು ಬೀಗ ಹಾಕಿದರು. ಹರಾಜು ಪ್ಲಾಟ್ ಫಾರಂಗಳಿಂದ ರೈತರು ಹೊರಬಂದು ಖರೀದಿ ಕಂಪನಿಗಳು, ತಂಬಾಕು ಮಂಡಳಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಮಾರುಕಟ್ಟೆಯ ಮೂರು ಪ್ಲಾಟ್ ಫಾರಂಗಳ ಹರಾಜು ಅಧೀಕ್ಷಕರು ಖರೀದಿ ಕಂಪನಿಗಳು ಮತ್ತು ರೈತರೊಂದಿಗೆ ಚರ್ಚಿಸಲು ತುರ್ತು ಸಭೆ ನಡೆಸಿದರು.
ಹರಾಜು ಅಧೀಕ್ಷಕ ಸಿದ್ದರಾಜು ಮಾತನಾಡಿ, ಇಂದು ಕೂಡ 15 ಕಂಪನಿಗಳು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿವೆ. ಐಟಿಸಿ ಮತ್ತು ಜಿಪಿಐ ಕಂಪನಿಗಳು ಖರೀದಿಸುತ್ತಿವೆ. ದರ ಕುಸಿತಕ್ಕೆ ಕಾರಣ ತಿಳಿದುಬಂದಿಲ್ಲ. ತಂಬಾಕು ಮಾರಲು ವಿರೋಧಿಸಿ ರೈತರು ಮಾರುಕಟ್ಟೆಯಿಂದ ಹೊರಬಂದಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಸಭೆಯಲ್ಲಿದ್ದ ಐಟಿಸಿ ಕಂಪನಿಯ ವೇಣುಪ್ರವೀಣ್, ಜಿಪಿಐ ಕಂಪನಿಯ ವಂಶಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಆದರೆ ಸಮಸ್ಯೆಗೆ ಪರಿಹಾರ ಸಿಗಲಿಲ್ಲ. ಪ್ರತಿಭಟನೆಯಲ್ಲಿ ರೈತ ಮುಖಂಡರಾದ ದೇವರಾಜು, ಶ್ರೀಧರ್, ಬಿಳಿಗೆರೆ ಪ್ರಭಾಕರ್, ಸತೀಶ್, ಸ್ವಾಮಿಗೌಡ, ಹರಾಜು ಅಧೀಕ್ಷಕರಾದ ಸಿ.ಆರ್.ಮೀನಾ, ಪ್ರಭಾಕರ್, ಎಸ್‌ಐ ರಾಜು, ಎಎಸ್‌ಐ ಮಹೇಶ್ ಹಾಗೂ ರೈತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net