ಗಂಗೋತ್ರಿ ಬಡಾವಣೆಯ ಕೆಲವು ಕ್ರಾಸ್‌ಗಳಲ್ಲಿ ಮೇ 31ರಿಂದ ಕುಡಿಯುವ ನೀರಿಗೆ ಕೊಳಚೆ ನೀರು ಮಿಶ್ರಿತವಾಗಿ ಸರಬರಾಜಾಗುತ್ತಿದೆ. ದುರ್ವಾಸನೆಯುಕ್ತ ನೀರು ಸರಬರಾಜಾಗಿ ಸಂಪುಗಳು ಹಾಗೂ ಟ್ಯಾಂಕುಗಳಿಗೆ ಸೇರಿದ ಕಾರಣ, ಇದನ್ನು ತಿಳಿಯದೆ ಬಳಸಿದ ಬಡಾವಣೆಯ ಹಲವಾರು ಮಂದಿ ಕಾಯಿಲೆಗೆ ತುತ್ತಾಗಿದ್ದಾರೆ. ಮಕ್ಕಳು, ವೃದ್ಧರು ಸೇರಿದಂತೆ ಹಲವರಿಗೆ ವಾಂತಿ, ಬೇಧಿ, ಜ್ವರದಂತಹ ಅನಾರೋಗ್ಯ ಕಾಣಿಸಿಕೊಂಡಿದೆ.