ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಕೈ ಬಿಡುಲು ಯತ್ನ:ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ವಾಗ್ದಾಳಿ

ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಚಾಮುಂಡೇಶ್ವರಿ ಮತ್ತು ಇಲವಾಲ ಬ್ಲಾಕ್‌ನ ಬಿಎಲ್‌ಎ ಗಳಿಗೆ ಎಸ್‌ಐಆರ್ ಮತ ಪರಿಷ್ಕರಣೆ ಸಂಬಂಧ ಕಾರ್ಯಾಗಾರ ಆಯೋಜಿಸಲಾಗಿತ್ತು. ಪೃಥ್ವಿರಾಜ್, ಬಿ.ಜೆ.ವಿಜಯಕುಮಾರ್, ಸತೀಶ್‌ಕುಮಾರ್, ಗುರುಸ್ವಾಮಿ, ಪ್ರೇಮಶಂಕರ್, ಕೂರ್ಗಳ್ಳಿ ಮಹದೇವ್, ಅರುಣ್‌ಕುಮಾರ್ ಇತರರು ಇದ್ದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಚಾಮುಂಡೇಶ್ವರಿ ಮತ್ತು ಇಲವಾಲ ಬ್ಲಾಕ್‌ನ ಬಿಎಲ್‌ಎ ಗಳಿಗೆ ಎಸ್‌ಐಆರ್ ಮತ ಪರಿಷ್ಕರಣೆ ಸಂಬಂಧ ಕಾರ್ಯಾಗಾರ ಆಯೋಜಿಸಲಾಗಿತ್ತು. ಪೃಥ್ವಿರಾಜ್, ಬಿ.ಜೆ.ವಿಜಯಕುಮಾರ್, ಸತೀಶ್‌ಕುಮಾರ್, ಗುರುಸ್ವಾಮಿ, ಪ್ರೇಮಶಂಕರ್, ಕೂರ್ಗಳ್ಳಿ ಮಹದೇವ್, ಅರುಣ್‌ಕುಮಾರ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದ ಬಿಜೆಪಿ
  • ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಕಾಂಗ್ರೆಸ್ ಮತದಾರರು ಎನ್ನುವ ಕಾರಣಕ್ಕೆ ಅವರ ಹೆಸರನ್ನು ಮತಪಟ್ಟಿಯಿಂದ ತೆಗೆಯಲು ಮುಂದಾಗಿದೆ
ಮೈಸೂರು:ಮತಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಕಾಂಗ್ರೆಸ್‌ನ ಸಾಂಪ್ರಾಯಿಕ ಮತಗಳನ್ನು ಕೈ ಬಿಡುಲು ಬಿಜೆಪಿ ಮುಂದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದೂರಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪಕ್ಷದ ಕಚೇರಿಯಲ್ಲಿ ಚಾಮುಂಡೇಶ್ವರಿ ಮತ್ತು ಇಲವಾಲ ಬ್ಲಾಕ್‌ನ ಬಿಎಲ್‌ಎಗಳಿಗೆ ಎಸ್‌ಐಆರ್ ಮತ ಪರಿಷ್ಕರಣೆ ಸಂಬಂಧ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಜಾಪ್ರಭುತ್ವ, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದ ಬಿಜೆಪಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಕಾಂಗ್ರೆಸ್ ಮತದಾರರು ಎನ್ನುವ ಕಾರಣಕ್ಕೆ ಅವರ ಹೆಸರನ್ನು ಮತಪಟ್ಟಿಯಿಂದ ತೆಗೆಯಲು ಮುಂದಾಗಿದೆ. ಈಗಾಗಲೇ ಬಿಜೆಪಿ, ಕೋಟ್ಯಂತರ ಮತದಾರರನ್ನು ಪಟ್ಟಿಯಿಂದ ಕೈ ಬಿಟ್ಟಿದೆ. ಇಂತಹ ಅಡ್ಡ ದಾರಿಯಿಂದ ಬಿಜೆಪಿ ದೇಶದಲ್ಲಿ ಅಧಿಕಾರವನ್ನು ಹಿಡಿದಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಕುತಂತ್ರಕ್ಕೆ ಅವಕಾಶ ನೀಡದಂತೆ ನಮ್ಮ ಕಾರ್ಯಕರ್ತರು, ಪ್ರತಿ ಮತದಾರರ ಮನೆಗೆ ಹೋಗಿ ಪಟ್ಟಿಯಲ್ಲಿ ಹೆಸರು ಇರುವಂತೆ ನೋಡಿಕೊಳ್ಳಬೇಕು ಎಂದು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಜೆ.ವಿಜಯ್ಕುಮಾರ್ ಮಾತನಾಡಿ, ಪ್ರಸ್ತುತ ಕೇಂದ್ರದ ಚುನಾವಣಾ ಆಯೋಗ ಜಾರಿಗೆ ತಂದಿರುವ ವೋಟ್ ಮ್ಯಾಪಿಂಗ್ ಹಾಗೂ ಎಸ್‌ಐಆರ್ ಎಂಬ ಹೊಸ ಪದ್ಧತಿ ಇತಿಹಾಸದುದ್ದಕ್ಕೂ ಇರುವ ಕಾಂಗ್ರೆಸ್ ಸಾಂಪ್ರದಾಯಿಕ ಮತಗಳಿಗೆ ವಿಷ ಹಾಕಿ ಕೊಲ್ಲುವುದಾಗಿದೆ ಎಂದರು.
ದೇಶದ ಎಲ್ಲ ಹಂತದ ಚುನಾವಣೆಗಳನ್ನು ವಾಮ ಮಾರ್ಗದಲ್ಲಿ ಗೆಲ್ಲುವುದೇ ಬಿಜೆಪಿಯ ಮೂಲ ಉದ್ದೇಶ. ಸ್ವಾತಂತ್ರ್ಯದ ಉತ್ತರದಿಂದಲೂ ಸ್ವಾಯುತ್ತತೆ ಮತ್ತು ಮತದಾನದ ಹಕ್ಕಿನ ಸಾರ್ವಭೌಮತ್ವವನ್ನು ಕಾಯ್ದುಕೊಂಡಿದ್ದ ಕೇಂದ್ರ ಚುನಾವಣಾ ಆಯೋಗ, ಈಗ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಮಂಡಿ ಊರಿದೆ ಎಂದು ದೂರಿದರು.
ಕಾಂಗ್ರೆಸ್ ದೇಶದಲ್ಲಿ ನೂರು ಚುನಾವಣೆಗಳಲ್ಲಿ ಸೋತರು ಕೂಡ ರಾಷ್ಟ್ರೀಯ ಮಟ್ಟದ ಚಳವಳಿಯಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಬಿಜೆಪಿಯ ಆಂತರ್ಯದ ಒಳ ವರ್ಮ ಏನೆಂದರೆ ತಿಳಿದಿದ್ದು, ಒಕ್ಕೂಟ ವ್ಯವಸ್ಥೆಯನ್ನು ನೆಲಸಮ, ದೇಶದ ಏಕ ಚಕ್ರಾಧಿಪತ್ಯದಲ್ಲಿರುವ ಮೂಲ ಉದ್ದೇಶ. ಅದಕ್ಕೆ ಅವಕಾಶ ನೀಡದೆ ಬಿಜೆಪಿಯ ಪ್ರಜಾತಂತ್ರ ವ್ಯವಸ್ಥೆಗೆ ಭವಿಷ್ಯದ ಅಪಾಯಕ್ಕೆ ಈಗಾಗಲೇ ಮುದ್ರೆ ಬೀಳಲಿದೆ ಎಂದು ಹೇಳಿದರು.
ಯಾವ ಕಾರಣಕ್ಕೂ ಮತದಾರರ ಪಟ್ಟಿಯಿಂದ ಒಂದೇ ಒಂದು ವೋಟು ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಕಾಂಗ್ರೆಸ್ ಕಾರ್ಯಕರ್ತರ ಕರ್ತವ್ಯವಾಗಿದೆ. ಇಂತಹ ದುಸ್ತರ ಸಂದರ್ಭದಲ್ಲಿ ನಾವು ಹೆಚ್ಚಿನ ಗಮನ ಹರಿಸಬೇಕು ಎಂದು ಕೋರಿದರು.
ಜಾಗೃತ ಕರ್ನಾಟಕದ ಎಸ್‌ಐಆರ್ ತರಬೇತುದಾರ ಪೃಥ್ವಿರಾಜ್, ಮತದಾರರ ಪರಿಷ್ಕರಣೆಯ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಹಾಜರಿದ್ದ ಬಿಎಲ್‌ಎಗಳಿಗೆ ಪ್ರಸ್ತುತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸತೀಶ್‌ಕುಮಾರ್, ಗುರುಸ್ವಾಮಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಶಂಕರ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಅರುಣ್‌ಕುಮಾರ್, ರಾಕೇಶ್ ಪಾಪಣ್ಣ, ಹಾಪ್‌ಕಾಮ್ಸ್ ನಿರ್ದೇಶಕ ಹೊಸಹುಂಡಿ ರಘು, ಮುಖಂಡರಾದ ರಾಮೇಗೌಡ, ಹರೀಶ್, ಉಮಾಶಂಕರ್, ಬೂತ್‌ಮಟ್ಟದ ಅಧ್ಯಕ್ಷರು, ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net