ಮಾದಪ್ಪ ಯೋಗೇಂದ್ರಗೆ ಅಭಿನಂದನೆ

ಮೈಸೂರು ಅಥ್ಲೆಟಿಕ್ಸ್ ಕ್ಲಬ್ ವತಿಯಿಂದ ಮಾದಪ್ಪ ಯೋಗೇಂದ್ರ ಅವರನ್ನು ಭಾನುವಾರ ಅಭಿನಂದಿಸಲಾಯಿತು. ಚೈನ್ ಸಿಂಗ್ ರಾಜ್ ಪುರೋಹಿತ್, ಅಂಶಿ ಪ್ರಸನ್ನಕುಮಾರ್, ಟಿ.ಆರ್.ಸತೀಶ್ ಕುಮಾರ್, ಉದಯ, ಜಿ.ಆರ್.ಪ್ರಭಾಕರ್, ಕೆ.ಬಿ. ಗಂಗಾಧರ್, ಮಹಾದೇವಯ್ಯ, ಕೆ.ಗೋಪಿನಾಥ್ ಮತ್ತು ಗೋಪಾಲಕೃಷ್ಣ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿರುವ ಕ್ರೀಡಾಪಟು

ದಕ್ಷಿಣ ಕೊರಿಯಾದ ಡೆಗೂ ನಗರದಲ್ಲಿ ಆಯೋಜಿಸಿರುವ 26ನೇ ವಿಶ್ವ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುತ್ತಿರುವ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಮೈಸೂರು ಅಥ್ಲೆಟಿಕ್ಸ್ ಕ್ಲಬ್ ಕಾರ್ಯದರ್ಶಿ ಮಾದಪ್ಪ ಯೋಗೇಂದ್ರ ಅವರನ್ನು ಭಾನುವಾರ ಅಭಿನಂದಿಸಲಾಯಿತು.

ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಕ್ಲಬ್ ಅಧ್ಯಕ್ಷ ಚೈನ್ ಸಿಂಗ್ ರಾಜ್ ಪುರೋಹಿತ್ ಅವರು ಯೋಗೇಂದ್ರ ಅವರನ್ನು ಸನ್ಮಾನಿಸಿದರು. ಭಾರತ ಪ್ರತಿನಿಧಿಸುತ್ತಿರುವ ಎಂ.ಯೋಗೇಂದ್ರ ಪುರುಷರ ವಿಭಾಗದ (60+ ವಯೋಮಿತಿ) 2000 ಮೀಟರ್ ಸ್ಟೀಪಲ್ ಚೇಸ್ ಓಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಹಿರಿಯ ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಟಿ.ಆರ್. ಸತೀಶ್ ಕುಮಾರ್, ಉದಯ, ಕ್ಲಬ್‌ನ ಕಾರ್ಯಕಾರಿ ಸಮಿತಿ ಸದಸ್ಯರಾದ ಜಿ.ಆರ್. ಪ್ರಭಾಕರ್, ಕೆ.ಬಿ. ಗಂಗಾಧರ್, ಮಹಾದೇವಯ್ಯ, ಕೆ.ಗೋಪಿನಾಥ್ ಮತ್ತು ಗೋಪಾಲಕೃಷ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net