ಗೃಹಿಣಿ ಪೀಡಿಸುತ್ತಿದ್ದವನ ವಿರುದ್ಧ ದೂರು

ಕ್ರೈಮ್
ಕ್ರೈಮ್
Published on
ಮೈಸೂರು: ಮೊಬೈಲ್ ನಂಬರ್ ನೀಡುವಂತೆ ನೆರೆ ಮನೆಯ ಗೃಹಿಣಿ ಪೀಡಿಸುವ ಜತೆಗೆ ಆಕೆಯ ಗಂಡನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ವ್ಯಕ್ತಿ ವಿರುದ್ಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿನಕಲ್ ನಿವಾಸಿ ದೇವರಾಜು(45) ವಿರುದ್ಧ ದೂರು ದಾಖಲಾಗಿದ್ದು, ನಿತ್ಯ ನನ್ನನ್ನು ಹಿಂಬಾಲಿಸುವ ಮೂಲಕ ಮೊಬೈಲ್ ನಂಬರ್ ಕೊಡು ಎಂದು ಪೀಡಿಸುತ್ತಿದ್ದು, ಕೊಡದಿದ್ದರೆ ಸುಮ್ಮನೆ ಬಿಡುವುದಿಲ್ಲ. ಗಂಡನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net