ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ಸ್ಪರ್ಧೆಗಳು ಸಹಕಾರಿ

ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ದಿಶಾ ರಮೇಶ್ ಅವರನ್ನು ಅಭಿನಂದಿಸಲಾಯಿತು. ಪ್ರೊ. ಎಂ.ಎಸ್.ಕೆ. ನರಹರಿ ಬಾಬು, ಎಂ.ಡಿ. ಗೋಪಿನಾಥ್, ಎಸ್. ಬಾಲಾಜಿ,  ಕೆ.ಎನ್. ಪಣೀಶ, ಸಿ.ಆರ್. ನಾಗರಾಜ್, ಪ್ರೊ. ಕೆ.ವಿ. ಸತ್ಯನ್, ವೈ.ಆರ್. ರಮೇಶ್, ಜಿ.ಕೆ.ಇಂದುಮತಿ ಇದ್ದರು.
ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ದಿಶಾ ರಮೇಶ್ ಅವರನ್ನು ಅಭಿನಂದಿಸಲಾಯಿತು. ಪ್ರೊ. ಎಂ.ಎಸ್.ಕೆ. ನರಹರಿ ಬಾಬು, ಎಂ.ಡಿ. ಗೋಪಿನಾಥ್, ಎಸ್. ಬಾಲಾಜಿ, ಕೆ.ಎನ್. ಪಣೀಶ, ಸಿ.ಆರ್. ನಾಗರಾಜ್, ಪ್ರೊ. ಕೆ.ವಿ. ಸತ್ಯನ್, ವೈ.ಆರ್. ರಮೇಶ್, ಜಿ.ಕೆ.ಇಂದುಮತಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಎಸ್.ಕೆ. ನರಹರಿ ಬಾಬು ಅಭಿಮತ
ಸದ್ವಿದ್ಯಾ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ಸಮರ್ಥ ಸದ್ವಿದ್ಯಾ ಅಂತರ ಕಾಲೇಜು ಸಂಗೀತ, ಸಾಹಿತ್ಯ ಹಾಗೂ ರ‌್ಯಾಪಿಡ್ ಚೆಸ್ ಸ್ಪರ್ಧೆಗಳು ಯಶಸ್ವಿಯಾಗಿ ನಡೆದವು.
11 ವಿವಿಧ ಸ್ಪರ್ಧೆಗಳನ್ನು ಆಯೋಜಿಸಿತ್ತು. ನಗರದ ವಿವಿಧ ಕಾಲೇಜುಗಳಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಪ್ರತಿಭೆ ಅನಾವರಣಗೊಳಿಸಿದರು.
ಸಂಸ್ಥೆಯ ಅಧ್ಯಕ್ಷ ಪ್ರೊ. ಎಂ.ಎಸ್.ಕೆ. ನರಹರಿ ಬಾಬು ಮಾತನಾಡಿ, ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎಂಬ ಆಶಯದೊಂದಿಗೆ ಸಂಸ್ಕೃತಿ ಹಾಗೂ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಎಲ್ಲರ ಜವಾಬ್ದಾರಿ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಸ್ಪರ್ಧೆಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ ಎಂದರು.
ನಟನ ರಂಗಶಾಲೆಯ ರಂಗಕಲಾವಿದೆ ದಿಶಾ ರಮೇಶ್ ಮಾತನಾಡಿದರು. ಜನಪದ ಗೀತೆ ಹಾಡಿ ವಿದ್ಯಾರ್ಥಿಗಳನ್ನು ರಂಜಿಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಎಂ.ಡಿ. ಗೋಪಿನಾಥ್ ನಗಾರಿ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ಎಸ್. ಬಾಲಾಜಿ, ಸಹ ಕಾರ್ಯದರ್ಶಿ ಕೆ.ಎನ್. ಪಣೀಶ, ಸಿ.ಆರ್. ನಾಗರಾಜ್, ಪ್ರೊ. ಕೆ.ವಿ. ಸತ್ಯನ್, ಕಾಲೇಜಿನ ಪ್ರಾಂಶುಪಾಲ ವೈ.ಆರ್. ರಮೇಶ್, ಉಪಪ್ರಾಂಶುಪಾಲರಾದ ಜಿ.ಕೆ. ಇಂದುಮತಿ ಇದ್ದರು.
ಕರ್ನಾಟಕ ಶಾಸ್ತ್ರೀಯ ಸಂಗೀತ, ಜನಪದ ಗೀತೆ, ವಾದ್ಯ ಸಂಗೀತ, ಭಾವಗೀತೆ, ಚಿತ್ರಗೀತೆ, ಭರತನಾಟ್ಯ, ಕನ್ನಡ ಹಾಗೂ ಇಂಗ್ಲಿಷ್ ಚರ್ಚಾ ಸ್ಪರ್ಧೆ, ಏಕಪಾತ್ರ ಅಭಿನಯ, ರಸಪ್ರಶ್ನೆ ಮತ್ತು ರ‌್ಯಾಪಿಡ್ ಚೆಸ್ ಸ್ಪರ್ಧೆಗಳು ಗಮನ ಸೆಳೆದವು.
ರ‌್ಯಾಪಿಡ್ ಚೆಸ್‌ನ ರೋಲಿಂಗ್ ಟ್ರೋಫಿಯನ್ನು ಪ್ರಮತಿ ಪಿಯು ಕಾಲೇಜು, ಇಂಗ್ಲಿಷ್ ಚರ್ಚಾ ಸ್ಪರ್ಧೆಯ ರೋಲಿಂಗ್ ಟ್ರೋಫಿಯನ್ನು ರಾಮಕೃಷ್ಣ ವಿದ್ಯಾಶಾಲೆ ಪಡೆದುಕೊಂಡವು. ಜ್ಞಾನೋದಯ ಪಿಯು ಕಾಲೇಜು ಏಳು ಸ್ಪರ್ಧೆಗಳಲ್ಲಿ ಜಯ ಸಾಧಿಸಿ ರೋಲಿಂಗ್ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿತು. ಸದ್ವಿದ್ಯಾ ಕಾಂಪೋಸಿಟ್ ಪಿಯು ಕಾಲೇಜು ಕನ್ನಡ ಚರ್ಚಾ ಹಾಗೂ ರಸಪ್ರಶ್ನೆ ಸ್ಪರ್ಧೆಗಳ ರೋಲಿಂಗ್ ಟ್ರೋಫಿ ಗೆದ್ದುಕೊಂಡಿತು.
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ನಿರಾಮಯ ವಿ.ರಾವ್ ಪ್ರಥಮ, ರಮಾ ಸಹಸ್ರ ಅಂಜನ ಮಠಂ ದ್ವಿತೀಯ ಹಾಗೂ ರಕ್ಷಾ ರಾವ್ ತೃತೀಯ ಸ್ಥಾನ ಪಡೆದರು. ಜನಪದ ಗೀತೆ ಸ್ಪರ್ಧೆಯಲ್ಲಿ ಸಾನ್ವಿ ಆರ್. ಪ್ರಥಮ, ನಿಖಿಲ್ ಎಸ್. ದ್ವಿತೀಯ ಹಾಗೂ ವೇಣುಗೋಪಾಲ್ ಎಸ್.ಎಲ್. ತೃತೀಯ ಸ್ಥಾನ ಗಳಿಸಿದರು. ವಾದ್ಯ ಸಂಗೀತದಲ್ಲಿ ಪ್ರದ್ಯುಮ್ನ ಕೆ. ಪ್ರಸಾದ್ ಪ್ರಥಮ, ಭುವನ್ ದ್ವಿತೀಯ ಹಾಗೂ ಪಂಚಮಿ ತೃತೀಯ ಸ್ಥಾನ ಪಡೆದರು. ಭಾವಗೀತೆ, ಚಿತ್ರಗೀತೆ, ಭರತನಾಟ್ಯ, ಕನ್ನಡಇಂಗ್ಲಿಷ್ ಚರ್ಚೆ, ಏಕಪಾತ್ರ ಅಭಿನಯ, ರಸಪ್ರಶ್ನೆ ಹಾಗೂ ರ್ಯಾಪಿಡ್ ಚೆಸ್ ಸ್ಪರ್ಧೆಗಳಲ್ಲೂ ವಿದ್ಯಾರ್ಥಿಗಳು ಗಮನ ಸೆಳೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net