ಬಾಲ್ಯವಿವಾಹಮುಕ್ತ ಜಿಲ್ಲೆಗೆ ಪಣ

ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಉಷಾರಾಣಿ, ಕೆ.ಕೆ.ಅಮರ್ನಾಥ್, ಲಕ್ಷ್ಮೀಕಾಂತ್ ರೆಡ್ಡಿ , ಎಸ್.ಯುಕೇಶ್ ಕುಮಾರ್, ವೆಂಕಟೇಶ್, ಎಸ್.ಮಂಜು, ಶೇಖ್ ತನ್ವೀರ್ ಆಸಿಫ್, ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.
ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು. ಉಷಾರಾಣಿ, ಕೆ.ಕೆ.ಅಮರ್ನಾಥ್, ಲಕ್ಷ್ಮೀಕಾಂತ್ ರೆಡ್ಡಿ , ಎಸ್.ಯುಕೇಶ್ ಕುಮಾರ್, ವೆಂಕಟೇಶ್, ಎಸ್.ಮಂಜು, ಶೇಖ್ ತನ್ವೀರ್ ಆಸಿಫ್, ಮಲ್ಲಿಕಾರ್ಜುನ ಬಾಲದಂಡಿ ಇತರರಿದ್ದರು.
Published on
ಮೈಸೂರು: ಬಾಲ್ಯ ವಿವಾಹ ನಿರ್ಮೂಲನೆ ಕೆಲಸ ಕೇವಲ ಒಂದು ವಿಭಾಗದ ಜವಾಬ್ದಾರಿಯಲ್ಲ. ಇದೊಂದು ಸಾಮೂಹಿಕ ಹಾಗೂ ಎಲ್ಲ ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹೇಳಿದರು.
ಕಲಾಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಬಾಲ್ಯವಿವಾಹಮುಕ್ತ ಜಿಲ್ಲೆ ಕಾರ್ಯಾಗಾರದಲ್ಲಿ ಮಾತನಾಡಿ, ಇಂದಿನ ಬಹಳಷ್ಟು ಇಲಾಖೆ ಅಧಿಕಾರಿಗಳಲ್ಲಿ ಅದರಲ್ಲೂ ಶಿಕ್ಷಣ, ಆರೋಗ್ಯ ವಿಭಾಗ ಸೇರಿದಂತೆ ಎಲ್ಲರೂ ಬಾಲ್ಯವಿವಾಹ ಕೇವಲ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗಕ್ಕೆ ಸಂಬಂಧಿಸಿದೆ ಎಂದು ಭಾವಿಸಿದ್ದಾರೆ. ಇದು ತಪ್ಪು. 2024 ರಲ್ಲಿ 224 ಬಾಲ್ಯ ವಿವಾಹವನ್ನು ತಡೆಯಲಾಗಿದೆ. ಆದರೂ ಸಹ 56 ಬಾಲ್ಯವಿವಾಹ ಪ್ರಕರಣಗಳು ಕಂಡು ಬಂದಿವೆ. ಕಳೆದ (2025) ವರ್ಷದಲ್ಲೂ 268 ಬಾಲ್ಯವಿವಾಹ ತಡೆಯಲಾಗಿದ್ದು 24 ಬಾಲ್ಯವಿವಾಹಗಳು ನಡೆದಿವೆ. ನಾವು ಬಾಲ್ಯವಿವಾಹವನ್ನು ಶೂನ್ಯ ಪ್ರಮಾಣಕ್ಕೆ ತರಲು ಎಷ್ಟೇ ಪ್ರಯತ್ನಿಸಿದರೂ ನಡೆಯುತ್ತಿರುವುದು ನಮ್ಮೆಲ್ಲರ ವೈಫಲ್ಯವೆಂದರೆ ತಪ್ಪಾಗಲಾರದು ಎಂದರು.
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪಿಡಿಒಗಳಿಗೆ ಅಥವಾ ಆರೋಗ್ಯ ವಿಭಾಗದ ಸಿಬ್ಬಂದಿಗೆ ಒಂದು ಗ್ರಾಮದಲ್ಲಿ ನಡೆಯುವ ಬಾಲ್ಯವಿವಾಹದ ಬಗ್ಗೆ ಮಾಹಿತಿ ಬಂದೇ ಬರುತ್ತದೆ. ಆದರೂ, ಅಂತಹ ವಿವಾಹಗಳನ್ನು ತಡೆಗಟ್ಟುವುದರಲ್ಲಿ ಅಥವಾ ಖಂಡಿಸುವುದರಲ್ಲಿ ನಾವು ವಿಫಲರಾಗಿದ್ದೇವೆ. 2026ರಲ್ಲಿ ಬಾಲ್ಯ ವಿವಾಹವನ್ನು ತಡೆಯಲು ತರಬೇತಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಇದರಿಂದ ನೀವು ಎಲ್ಲೇ ಬಾಲ್ಯ ವಿವಾಹಗಳು ನಡೆಯುವ ಪ್ರಯತ್ನವನ್ನು ವಿಫಲ ಮಾಡಿ ಮೈಸೂರು ಜಿಲ್ಲೆಯನ್ನು ಬಾಲ್ಯವಿವಾಹಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಉಷಾರಾಣಿ ಮಾತನಾಡಿ, ಮಕ್ಕಳ ಮೇಲೆ ನಡೆಯುವ ಎಲ್ಲ ದೌರ್ಜನ್ಯಗಳು ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುವ ಒಂದು ಗಂಭೀರ ಸಾಮಾಜಿಕ ಸಮಸ್ಯೆಯಾಗಿದೆ. ಮಕ್ಕಳ ಶಿಕ್ಷಣ, ಆಟ, ವಿಶ್ರಾಂತಿ ಹಾಗೂ ಆರೋಗ್ಯದ ಹಕ್ಕುಗಳನ್ನು ಕಸಿದುಕೊಂಡು ಅವರ ಭವಿಷ್ಯ ಹಾಳು ಮಾಡುತ್ತಿದೆ ಎಂದರು.
ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಮಾಡುವ ಉದ್ದೇಶ ಹೊಂದಿ ಸುಪ್ರೀಂಕೋರ್ಟ್ ಕೆಲ ನಿರ್ದೇಶನಗಳನ್ನು ನೀಡಿದೆ.ಬಾಲ್ಯವಿವಾಹ ಪದ್ಧತಿ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುವ ಒಂದು ಗಂಭೀರ ಸಮಸ್ಯೆಯಾಗಿದೆ. ಮಕ್ಕಳ ಹಕ್ಕುಗಳ ರಕ್ಷಣೆ ಮಾಡಲು ಮತ್ತು ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಕೆ.ಅಮರ್ನಾಥ್ ಮಾತನಾಡಿ, ಪ್ರತಿದಿನವೂ ಬಾಲ್ಯ ವಿವಾಹ, ಅಪ್ರಾಪ್ತ ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿವೆ. ಆದರೂ ನಮಗೆ ಈ ವಿಷಯದ ಬಗ್ಗೆ ಅರಿವಿಲ್ಲದಂತೆ ಇರುತ್ತೇವೆ. ಆ ವಿಷಯಗಳು ತಿಳಿದಿದ್ದರೂ ತಿಳಿಯದ ಹಾಗೆ ಇರುತ್ತೇವೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ವೆಂಕಟೇಶ್, ಎಸ್.ಮಂಜು, ನಗರ ಪಾಲಿಕೆಯ ಆಯುಕ್ತ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ, ಮಕ್ಕಳ ಸಂರಕ್ಷಣೆ ವಿಷಯ ತಜ್ಞ ಕೆ.ರಾಘವೇಂದ್ರ ಭಟ್, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಸಿ.ವಿ.ಸ್ನೇಹಾ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net