ಪ್ರದರ್ಶನದಲ್ಲಿ ಬನಶಂಕರಿ ಅಮ್ಮನ ರಥೋತ್ಸವ, ಸಂತ ಶಿಶುನಾಳ ಶರೀಫ ಅಜ್ಜನ ಜಾತ್ರೆ, ಶ್ರೀ ದುರ್ಗಾಪರಮೇಶ್ವರಿ ಉತ್ಸವ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ, ಕುಕನೂರು ಗುಡ್ನೇಶ್ವರ ಜಾತ್ರೆ, ಮೈಸೂರು ದಸರಾ ಮಹೋತ್ಸವ, ಹೆಸರಘಟ್ಟ ಗ್ರಾಮದೇವತೆಯ ಆರತಿ ಮೆರವಣಿಗೆ, ಮಂಗಳೂರಿನ ಕೋಡಿಯಾಲ ತೇರು, ಉಚ್ಚಿಲದ ನವರಾತ್ರಿ, ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ರಥೋತ್ಸವ, ಗೋಕಾಕ್‌ನ ಭಂಡಾರ ಜಾತ್ರೆ ಹಾಗೂ ಕೊಪ್ಪಳದ ಹನುಮ ಮಾಲಾ ಅಂಜನಾದ್ರಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಭವವನ್ನು ಪ್ರತಿಬಿಂಬಿಸುವ ಛಾಯಾಚಿತ್ರಗಳು ಗಮನ ಸೆಳೆಯುತ್ತಿವೆ.