ಗಣ್ಯರ ಭೇಟಿ ಅವಧಿಯ ನಿಯಮವನ್ನು ಪಾಲನೆ ಮಾಡುವ ಮೂಲಕ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೆಚ್ಚುಗೆಗೆ ಪಾತ್ರವಾದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಡಾ.ಯತೀಂದ್ರ ಅವರು, ‘ನಾವೇ ನಿಯಮ ಮಾಡಿ ಅದನ್ನು ಉಲ್ಲಘನೆ ಮಾಡೋದು ಸರಿಯಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತದೆ. ಆದ ಕಾರಣ ದರ್ಶನ ಮಾಡಲಿಲ್ಲ. ಬೇರೆ ಗಣ್ಯರಿಗೂ ಈ ಮೂಲಕ ಮನವಿ ಮಾಡುವೆ. ಆಷಾಢ ಮಾಸದಲ್ಲಿ ಶುಕ್ರವಾರ, ಶನಿವಾರ, ಭಾನುವಾರ ಬೆಳಗ್ಗೆ 10ಗಂಟೆ ಒಳಗೆ ಬನ್ನಿ. ಇದರಿಂದ ಜನಸಾಮಾನ್ಯರಿಗೂ ಒಳ್ಳೆಯದಾಗುತ್ತದೆ ಎಂದು ಕೋರಿದರು.