ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲವಾಗುವುದಿಲ್ಲ. ಅನೇಕರು ಚರ್ಚೆ, ಟೀಕೆ ಮಾಡಿದರು. ಆದರೆ, ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಧರ್ಮವನ್ನು ಕಾಪಾಡಬೇಕಾಗಿರುವುದು ನಮ್ಮ ಕರ್ತವ್ಯ. ಯಾವುದೇ ಧರ್ಮವಾದರೂ ಅವರ ಆಚಾರ ವಿಚಾರ ಅನುಸರಿಸಿಕೊಂಡು ಹೋಗಬೇಕು. ಎಲ್ಲ ಧರ್ಮವನ್ನು ಸಮಾನವಾಗಿ ಕಾಣಬೇಕು. ಕುವೆಂಪು ಆಶಯದಂತೆ ರಾಜ್ಯವನ್ನು ಶಾಂತಿಯ ತೋಟ ನಿರ್ಮಿಸಬೇಕು ಎಂದರು.