ಒತ್ತುವರಿಯಾಗಿದ್ದ ಸರ್ಕಾರಿ ಜಾಗ ತೆರವು

ತಿ.ನರಸೀಪುರ ತಾಲೂಕು ಮಾಡ್ರಹಳ್ಳಿ ಗ್ರಾಮದಲ್ಲಿ ಒತ್ತುವರಿ  ಸರಕಾರಿ ಜಾಗವನ್ನು ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ನೇತತ್ವದಲ್ಲಿ  ತೆರವುಗೊಳಿಸಲಾಯಿತು. ಕರೊಹಟ್ಟಿ ಕುಮಾರಸ್ವಾಮಿ, ಶಾಂತಮೂರ್ತಿ, ನಂಜುಡಸ್ವಾಮಿ, ಪುಟ್ಟಬುದ್ಧಿ ಇತರರು ಇದ್ದಾರೆ.
ತಿ.ನರಸೀಪುರ ತಾಲೂಕು ಮಾಡ್ರಹಳ್ಳಿ ಗ್ರಾಮದಲ್ಲಿ ಒತ್ತುವರಿ ಸರಕಾರಿ ಜಾಗವನ್ನು ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ನೇತತ್ವದಲ್ಲಿ ತೆರವುಗೊಳಿಸಲಾಯಿತು. ಕರೊಹಟ್ಟಿ ಕುಮಾರಸ್ವಾಮಿ, ಶಾಂತಮೂರ್ತಿ, ನಂಜುಡಸ್ವಾಮಿ, ಪುಟ್ಟಬುದ್ಧಿ ಇತರರು ಇದ್ದಾರೆ.
Published on
ತಿ.ನರಸೀಪುರ: ತಾಲೂಕಿನ ಮಾಡ್ರಹಳ್ಳಿ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ತಹಸೀಲ್ದಾರ್ ಹಾಗೂ ಸರ್ವೆ ಅಧಿಕಾರಿಗಳು ಇತ್ತೀಚೆಗೆ ತೆರವುಗೊಳಿಸಿದರು.
ನಂತರ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಮಾತನಾಡಿ, ಸರ್ಕಾರಿ ಜಾಗ ಒತ್ತುವರಿ ಬಗ್ಗೆ ತಾಲೂಕು ರೈತ ಸಂಘಟನೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ವೆ ನಡೆಸಿ ರಸ್ತೆಯನ್ನು ಗುರುತಿಸಲಾಗಿತ್ತು. ಇದರಿಂದ ರೈತರು ಜಮೀನಿಗೆ ತೆರಳಲು ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ರೈತರು ಸಮರ್ಪಕವಾಗಿ ಕಾಲದಾರಿ, ರಸ್ತೆ, ಬಂಡಿ ರಸ್ತೆಗಳನ್ನು ಒತ್ತುವರಿ ಮಾಡಿಕೊಳ್ಳದೆ ಸಮರ್ಪಕವಾಗಿ ಬಳಸಿಕೊಂಡು ಕೃಷಿಯಲ್ಲಿ ತೊಡಗಿಸಿಕೊಳ್ಳವಂತೆ ಸಲಹೆ ನೀಡಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಕರೊಹಟ್ಟಿ ಕುಮಾರಸ್ವಾಮಿ ಮಾತನಾಡಿ, ಸುಮಾರು 46 ವರ್ಷಗಳಿಂದ ಸರ್ಕಾರಿ ಜಾಗ ಒತ್ತುವರಿಯಾಗಿದ್ದರಿಂದ ರೈತರು ಜಮೀನಿಗೆ ತೆರಳು ಸಮಸ್ಯೆ ಎದುರಿಸುತ್ತಿದ್ದರು. ತೆರವುಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರಿಂದ ತಹಸೀಲ್ದಾರ್ ಕ್ರಮ ಕೈಗೊಂಡಿದ್ದು, ರೈತರಿಗೆ ಅನುಕೂಲವಾಗಿದೆ ಎಂದರು.
ರೈತ ಮುಖಂಡರಾದ ಕೊತ್ತೇಗಾಲ ಶಾಂತಮೂರ್ತಿ, ಗ್ರಾಮ ಘಟಕದ ಅಧ್ಯಕ್ಷ ಮಾಡ್ರಹಳ್ಳಿ ನಂಜುಡಸ್ವಾಮಿ, ಪುಟ್ಟಬುದ್ಧಿ, ಹೋಬಳಿ ಅಧ್ಯಕ್ಷ ಶಿವಣ್ಣ, ಕೆಂಚಣ್ಣ, ಬಸವಯ್ಯ, ಕುಮಾರ್, ಸತೀಶ್, ಗ್ರಾಮಲೆಕ್ಕಿಗ ಸಂತೋಷ್, ಆರ್‌ಐ ಬಸವರಾಜು, ರೈತ ಮುಖಂಡರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net