ಅಚ್ಚುಕಟ್ಟಾದ ವ್ಯವಸ್ಥೆ: ಮ್ಯಾರಥಾನ್‌ನಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಗರಸಬೆ ಅಚ್ಚುಕಟ್ಟಾಗಿ ಮಾಡಿದ್ದ ವ್ಯವಸ್ಥೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮ್ಯಾರಥಾ ಓಟದ ರಸ್ತೆಗಳ ಮಾರ್ಗಸೂಚಿ, ಸ್ವಚ್ಛತೆ ಎಲ್ಲವನ್ನು ನಿರ್ವಹಿಸಲಾಗಿತ್ತು. ಸಂಘಸಂಸ್ಥೆಗಳು ಸ್ಫರ್ಧಾಳುಗಳಿಗೆ ನೀರು, ತಂಪು ಪಾನೀಯ, ಬಿಸ್ಕತ್ ಮುಂತಾದವುಗಳನ್ನು ನೀಡಿ ಹುರಿದುಂಬಿಸಿದರು. ಸಂವಿಧಾನ ವೃತ್ತದ ಅಲಂಕಾರ, ಸ್ವಚ್ಛತೆಯನ್ನು ಕಾಪಾಡುವಲ್ಲಿ ಪೌರಕಾರ್ಮಿಕರ ಅಚ್ಚುಕಟ್ಟುತನ ನಾಗರಿಕರಿಗೆ ಹರ್ಷ ತಂದಿತು. ಸ್ಪರ್ಧೆಯ ನಂತರ ಸ್ಪರ್ಧಾಳುಗಳಿಗೆ ಲಘು ಉಪಹಾರ ಆಯೋಜಿಸಲಾಗಿತ್ತು.