ಬೋಗಾದಿಯ ಕ್ರೈಸ್ಟ್ ಪಬ್ಲಿಕ್ ಶಾಲೆ ಚಾಂಪಿಯನ್

ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಸಿಬಿಎಸ್‌ಇ ಜಿಲ್ಲಾ ಮಟ್ಟದ ಅಂತರ-ಶಾಲಾ ‘ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಕಪ್  2026-27’ ಅನ್ನು ಪ್ರೊ. ಮಲ್ಲಯ್ಯ ಚಂದ್ರಕುಮಾರ್ ಉದ್ಘಾಟಿಸಿದರು. ಡಾ.ಎಚ್.ಕೆ. ಚೇತನ್, ಶಿವಶಂಕರ್, ಅನಿಲ್ ಬಿಜಲಾನಿ, ಡಾ. ರೂಪಾ ಕರುಂಬಯ್ಯ ಇತರರು ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ವಾಲಿಬಾಲ್ ನಲ್ಲಿ 30 ತಂಡಗಳು ಮತ್ತು ಥ್ರೋಬಾಲ್ ನಲ್ಲಿ 20 ತಂಡಗಳು ಭಾಗಿ
ಮೈಸೂರು:ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆಯು ಸಿಬಿಎಸ್‌ಇ ಜಿಲ್ಲಾ ಮಟ್ಟದ ಅಂತರ-ಶಾಲಾ ‘ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಕಪ್ 2026-27’ನಲ್ಲಿ ಜಿಲ್ಲೆಯ ವಿವಿಧ ಶಾಲೆಯ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ವಾಲಿಬಾಲ್ ನಲ್ಲಿ 30 ತಂಡಗಳು ಮತ್ತು ಥ್ರೋಬಾಲ್ ನಲ್ಲಿ 20 ತಂಡಗಳು ಭಾಗವಹಿಸಿ, ಕ್ರೀಡಾ ಸ್ಫೂರ್ತಿ ಮರೆದವು.
ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆಯ ಅಧ್ಯಕ್ಷ ಡಾ.ಎಚ್.ಕೆ. ಚೇತನ್, ಕಾರ್ಯದರ್ಶಿ ಶಿವಶಂಕರ್, ಖಜಾಂಚಿ ಅನಿಲ್ ಬಿಜಲಾನಿ, ಪ್ರಾಂಶುಪಾಲೆ ಡಾ. ರೂಪಾ ಕರುಂಬಯ್ಯ, ಪ್ರೊ. ಮಲ್ಲಯ್ಯ ಚಂದ್ರಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಪಂದ್ಯ ವಿಜೇತ ತಂಡಗಳು:
ಥ್ರೋಬಾಲ್‌ನಲ್ಲಿ ಬೋಗಾದಿಯ ಕ್ರೈಸ್ಟ್ ಪಬ್ಲಿಕ್ ಶಾಲೆಯು ಚಾಂಪಿಯನ್ ಆಗಿ ಹೊರಹೊಮ್ಮಿತು. ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆಯು ಎರಡನೇ ಸ್ಥಾನವನ್ನು, ತಾಂಡವಪುರದ ಕ್ರೈಸ್ಟ್ ಪಬ್ಲಿಕ್ ಶಾಲೆಯು ಮೂರನೇ ಸ್ಥಾನವನ್ನು ಮತ್ತು ಜೆಎಸ್‌ಎಸ್ ಪಬ್ಲಿಕ್ ಶಾಲೆಯು ನಾಲ್ಕನೇ ಸ್ಥಾನವನ್ನು ಪಡೆದುಕೊಂಡವು.
ವಾಲಿಬಾಲ್‌ನಲ್ಲಿ ಮೈಸೂರಿನ ಪೊಲೀಸ್ ಪಬ್ಲಿಕ್ ಶಾಲೆಯು ಪ್ರಥಮ ಸ್ಥಾನವನ್ನು ಗಳಿಸಿತು. ವಿವಿಎಸ್ ಬಿಎಂಶ್ರೀ ಶಾಲೆ, ಜಿಎಸ್‌ಎಸ್‌ಎಸ್ ಶಾಲೆ ಮತ್ತು ಮೈಸೂರು ವೆಸ್ಟ್ ಲಯನ್ಸ್ ಸೇವಾನಿಕೇತನ ಶಾಲೆಯು ಕ್ರಮವಾಗಿ ದ್ವಿತೀಯ, ತೃತೀಯ ಮತ್ತು ನಾಲ್ಕನೇ ಸ್ಥಾನಗಳನ್ನು ಪಡೆದುಕೊಂಡವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net