20ರಿಂದ 35 ವಯೋಮಾನದ ವಿದ್ಯಾರ್ಥಿ, ಯುವಜನರಿಗೆ ಆಯೋಜಿಸಿದ್ದ ಕವನ ಸ್ಪರ್ಧೆಯಲ್ಲಿ ಕೇರಳ ಕೇಂದ್ರೀಯ ವಿವಿ ಕನ್ನಡ ವಿಭಾಗದ ವಿದ್ಯಾರ್ಥಿ ದರ್ಶನ್ ಕುಮಾರ್ ಮತ್ತು ಜ್ಯೋತಿರ್ಲಕ್ಷ್ಮೀ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ, ಬೆಂಗಳೂರು ಗವಿಪುರಂ ಬಡಾವಣೆಯ ಅಚಲ ಬಿ.ಹೆನ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಅಥಣಿ ತಾಲೂಕು ಶೇಗುಣಸೆಯ ಸೀಮಾ ಶಿರಗುಪ್ಪಿ, ಬೆಂಗಳೂರು ಹನುಮಂತ ನಗರದ ವೈ.ಎಸ್.ಸುಪ್ರಿಯಾ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.