ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವ
ಮೂಗೂರು: ಇಲ್ಲಿನ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢಶಾಲಾ ವಿಭಾಗದ ಶಾಲಾ ವಾರ್ಷಿಕೋತ್ಸವ ನಿಮಿತ್ತ ಶಾಲಾ ಆವರಣದಲ್ಲಿ ಮಕ್ಕಳ ಆಹಾರ ಮೇಳ ಜರುಗಿತು.
ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಎಂ. ರಂಗಸ್ವಾಮಿ ಹಾಗೂ ಹಿರಿಯ ಉಪನ್ಯಾಸಕ ಪುಟ್ಟರಸ ಆಹಾರ ಮೇಳಕ್ಕೆ ಚಾಲನೆ ನೀಡಿದರು.
ಪ್ರೌಢಶಾಲೆಯ ಉಪಪ್ರಾಂಶುಪಾಲ ಸಿ ಪುಟ್ಟಸ್ವಾಮಿ ರವರ ಮಾರ್ಗದರ್ಶನದಲ್ಲಿ ನಡೆದ ಆಹಾರ ಮೇಳಕ್ಕೆ ನೂರಾರು ಜನ ವಿದ್ಯಾರ್ಥಿಗಳ ತಂಡ ಆಗಮಿಸಿ ವ್ಯಾಪಾರದ ಭರಾಟೆಯಲ್ಲಿ ತೊಡಗಿದರು. ಆರ್ಗ್ಯಾನಿಕ್ ಸರಕಿನಿಂದ ತಯಾರಿಸಲ್ಪಟ್ಟ ಆಹಾರ ಪದಾರ್ಥದ ತಿನಿಸುಗಳನ್ನು ರುಚಿಯನ್ನು ಸವಿದ ಶಿಕ್ಷಕರ ಬಾಯಲ್ಲಿ ನೀರು ತರಿಸಿತು. ತಿನಿಸುಗಳ ತಯಾರಿಕೆಯ ನೈಪುಣ್ಯತೆಯನ್ನು ಕಂಡು ಶಿಕ್ಷಕರು ಹಾಗೂ ಪಾಲಕರು ಬೆರಗಾದರು. ಆಹಾರ ಮೇಳದಲ್ಲಿ ಪ್ರಾಥಮಿಕ ಶಾಲೆ,ಕಾಲೇಜು ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದರ ಪರಿಣಾಮ ಮಕ್ಕಳಲ್ಲಿನ ಉತ್ಸಾಹ ಹಿಮ್ಮಡಿಗೊಂಡು ಆಹಾರ ಮೇಳಕ್ಕೆ ಮತ್ತಷ್ಟು ಕಳೆ ತಂದಿತ್ತು.
ಆಹಾರ ಮೇಳದಲ್ಲಿ ಪಾನಿಪುರಿ, ಚಾಟ್ಸ್, ಬೆಲ್ಲದ ಮಿಠಾಯಿ, ಚುರುಮುರಿ, ಸಿಹಿ ಜಾಮೂನು, ಮಸಾಲ ಮಜ್ಜಿಗೆ, ಖಾರಪುರಿ , ಎಳನೀರು, ನಿಂಬೆ ಹಣ್ಣಿನ ಜ್ಯೂಸ್, ಖಾದ್ಯ ತಿನಿಸುಗಳನ್ನು ಮಕ್ಕಳ ಕೈಗೆ ಎಟಕುವ ದರದಲ್ಲೇ ವ್ಯಾಪಾರದಲ್ಲಿ ತೊಡಗಿ ಎಲ್ಲರ ಗಮನ ಸೆಳೆದರು.
ಶಿಸ್ತು ಮತ್ತು ಶಾಲಾ ಆವರಣದ ನೈರ್ಮಲ್ಯ ಹಾಗೂ ಶುಚಿ ರುಚಿಗೆ ಹೆಚ್ಚಿನ ಒತ್ತು ನೀಡಿ ವಿದ್ಯಾರ್ಥಿಗಳು ಆಹಾರ ಮೇಳವನ್ನು ಆಯೋಜಿಸಿರುವುದು ಖುಷಿ ಆಯಿತು ಪಾಲಕ ಎಂದು ಎಂ.ಎಂ. ಜಗದೀಶ್ ತಿಳಿಸಿದರು.