ಮಕ್ಕಳು ಓದಿಗೆ ಹೆಚ್ಚು ಒತ್ತು ನೀಡಲಿ

ಹುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗೌರಿ ಬಿದನೂರು ನಾಗರಾಜು ಅಭಿಮಾನಿ ಬಳಗದ ವತಿಯಿಂದ ಸ್ವೆಟರ್ ವಿತರಿಸಲಾಯಿತು. ಕೃಷ್ಣಪ್ಪ, ಚಿಕ್ಕನಂಜಶೆಟ್ಟಿ, ಮಾದೇಶ್, ಚಂದ್ರಶೇಖರ್ ಇತರರಿದ್ದರು.
ಹುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗೌರಿ ಬಿದನೂರು ನಾಗರಾಜು ಅಭಿಮಾನಿ ಬಳಗದ ವತಿಯಿಂದ ಸ್ವೆಟರ್ ವಿತರಿಸಲಾಯಿತು. ಕೃಷ್ಣಪ್ಪ, ಚಿಕ್ಕನಂಜಶೆಟ್ಟಿ, ಮಾದೇಶ್, ಚಂದ್ರಶೇಖರ್ ಇತರರಿದ್ದರು.
Published on
ಹನೂರು: ಪ್ರತಿಯೊಬ್ಬರೂ ಓದಿಗೆ ಹೆಚ್ಚಿನ ಒತ್ತು ನೀಡುವುದರ ಮೂಲಕ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಗೌರಿ ಬಿದನೂರು ನಾಗರಾಜು ಅಭಿಮಾನಿ ಬಳಗದ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದರು.
ಶೈಕ್ಷಣಿಕ ವಲಯದ ಹುತ್ತೂರು ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಬಳಗದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಿ ಮಾತನಾಡಿದರು.
ಮಕ್ಕಳು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಹಾಗಾಗಿ ಇವರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆಯುವ ಬಹುತೇಕ ಮಕ್ಕಳು ಬಡ ವರ್ಗಕ್ಕೆ ಸೇರಿರುತ್ತಾರೆ. ಇವರ ಅವಶ್ಯಕತೆಯನ್ನು ಈಡೇರಿಸಲು ಕೆಲ ಪಾಲಕರು ಶಕ್ತರಿರುವುದಿಲ್ಲ. ಈ ದಿಸೆಯಲ್ಲಿ ಬಳಗದ ವತಿಯಿಂದ ಶಾಲೆಯ ಎಲ್ಲ ಮಕ್ಕಳಿಗೂ ಸ್ವೆಟರ್ ವಿತರಿಸಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಂಡು ಓದಿನ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದು ತಿಳಿಸಿದರು.
ಮುಖಂಡರಾದ ಚಿಕ್ಕನಂಜಶೆಟ್ಟಿ, ನಾಗರಾಜು, ಮಹದೇವಸ್ವಾಮಿ, ಮಾದೇಶ್, ವೆಂಕಟರಂಗಶೆಟ್ಟಿ, ಬಲಲಿಂಗಶೆಟ್ಟಿ, ಕುಮಾರ್, ನಾಗಸುಂದರ್, ಮುಖ್ಯಶಿಕ್ಷಕ ಸಿ. ಮಾದೇಶ್, ಶಿಕ್ಷಕರಾದ ಎಂ.ಸಿ ಚಂದ್ರಶೇಖರ್, ಷಡಕ್ಷರಸ್ವಾಮಿ, ಕುಮಾರ್, ನಟರಾಜು, ರೂಹುಲ್ಲಾ, ಮೋಚರಾಕಿನಿ, ಚೈತ್ರಾ ಹಾಗೂ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net