ಹನಗೋಡು: ಹೋಬಳಿಯ ವಿಜಯಗಿರಿ ಹಾಡಿಯಲ್ಲಿ ಬಿಸಿ ನೀರಿನ ಪಾತ್ರೆಗೆ ಬಿದ್ದು ತೀವ್ರ ಗಾಯಗೊಂಡಿದ್ದ ಎರಡು ವರ್ಷದ ಮಗು ಸಾವನ್ನಪ್ಪಿದೆ. ಜೇನುಕುರುಬರ ಬಸಪ್ಪ-ರಮ್ಯಾ ದಂಪತಿ ಪುತ್ರಿ ವೇದಾ ಎಂಬ ಎರಡು ವರ್ಷದ ಹೆಣ್ಣು ಮಗು ಶನಿವಾರ ಸಾವನ್ನಪ್ಪಿದೆ. ಮನೆಯಲ್ಲಿ ಮಗುವಿಗೆ ಸ್ನಾನ ಮಾಡಿಸುವಾಗ ನೀರು ಸುಡುತ್ತಿದ್ದರಿಂದ ತಾಯಿ ರಮ್ಯಾ ತಣ್ಣೀರು ತರಲು ಮನೆಯೊಳಗೆ ಹೋದ ಸಂದರ್ಭದಲ್ಲಿ ಮಗು ಸುಡುವ ನೀರು ಪಾತ್ರೆಗೆ ಬಿದ್ದು ತೀವ್ರ ಗಾಯಗೊಂಡಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮಗುವನ್ನು ಮೈಸೂರಿನ ಚೆಲುವಾಬ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮಗು ಮೃತಪಟ್ಟಿದೆ.