ಅಹಿಂದ ಯುವ ಸಮೂಹ ಮುಖ್ಯವಾಹಿನಿಗೆ ಬರಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

ಮೈಸೂರಿನ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ  ‘ಗಾಂಧೀ ಪ್ರಣೀತ ಧರ್ಮದರ್ಶಿತ್ವ’ ಮತ್ತು ‘ಬುದ್ಧ ನಾಗಾರ್ಜುನರ ಶೂನ್ಯಯಾನ’ ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಮೂಡ್ನಾಕೂಡು ಚಿನ್ನಸ್ವಾಮಿ, ನಟರಾಜ ಹುಲಿಯಾರ್, ಬಿ.ಆರ್.ಪಾಟೀಲ್, ಡಾ.ಹರೀಶ್ ಕುಮಾರ್, ಎಂ.ಶಿವಪ್ರಸಾದ್, ಅಹಿಂದ ಜವರಪ್ಪ ಇತರರಿದ್ದರು.
ಮೈಸೂರಿನ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಗಾಂಧೀ ಪ್ರಣೀತ ಧರ್ಮದರ್ಶಿತ್ವ’ ಮತ್ತು ‘ಬುದ್ಧ ನಾಗಾರ್ಜುನರ ಶೂನ್ಯಯಾನ’ ಕೃತಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು. ಮೂಡ್ನಾಕೂಡು ಚಿನ್ನಸ್ವಾಮಿ, ನಟರಾಜ ಹುಲಿಯಾರ್, ಬಿ.ಆರ್.ಪಾಟೀಲ್, ಡಾ.ಹರೀಶ್ ಕುಮಾರ್, ಎಂ.ಶಿವಪ್ರಸಾದ್, ಅಹಿಂದ ಜವರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗಾಂಧೀ ಪ್ರಣೀತ ಧರ್ಮದರ್ಶಿತ್ವ’ ಮತ್ತು ‘ಬುದ್ಧ ನಾಗಾರ್ಜುನರ ಶೂನ್ಯಯಾನ’ ಕೃತಿಗಳನ್ನು ಬಿಡುಗಡೆ
  • ಹೋರಾಟಗಾರ ಪ.ಮಲ್ಲೇಶ ಸ್ಮರಣಾರ್ಥ
  • ಚಲನೆಯನ್ನು ಕೊಟ್ಟಾಗ ಮಾತ್ರ ಸಮಾಜ ಪರಿವರ್ತನೆ
ಮೈಸೂರು: ಸಮಾಜದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪ.ಮಲ್ಲೇಶ ಸ್ಮರಣಾರ್ಥ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಗಾಂಧಿ ವಿಚಾರ ಪರಿಷತ್ತು ಹಾಗೂ ಮೈಸೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಂಶೋಧಕರು ಸಹಯೋಗದಲ್ಲಿ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ  ‘ಗಾಂಧೀ ಪ್ರಣೀತ ಧರ್ಮದರ್ಶಿತ್ವ’ ಮತ್ತು ‘ಬುದ್ಧ ನಾಗಾರ್ಜುನರ ಶೂನ್ಯಯಾನ’ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. 
ಅಹಿಂದ ವರ್ಗದ ಯುವ ಸಮೂಹ ಮುಖ್ಯವಾಹಿನಿಗೆ ಬಂದು ಸಮ ಸಮಾಜ ನಿರ್ಮಾಣ ಮಾಡಬೇಕು. ಜಾತಿ, ವರ್ಗ ವ್ಯವಸ್ಥೆ ಕೇವಲ ಮಾತಿನಲ್ಲಿ ಹೋಗುವುದಿಲ್ಲ. ಏಕೆಂದರೆ ಚಲನೆರಹಿತ ಸಮಾಜ ನಮ್ಮದು. ಚಲನೆಯನ್ನು ಕೊಟ್ಟಾಗ ಮಾತ್ರ ಸಮಾಜ ಪರಿವರ್ತನೆಯಾಗಲಿದೆ. ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ಕೊಟ್ಟಾಗ ಚಲನೆ ದೊರೆಯಲಿದೆ. ಜಾತಿ ವ್ಯವಸ್ಥೆ ನಾಶವಾಗಲಿದೆ ಎಂದು ಹೇಳಿದರು. 
ಸ್ವಾತಂತ್ರೃ ಬಂದಾಗ ಶೇ.12ರಷ್ಟು ಸಾಕ್ಷರತೆ ಇತ್ತು. ಇದೀಗ ಶೇ.78ರಷ್ಟಿದೆ. ವಿದ್ಯಾವಂತ ಸಂಖ್ಯೆ ಹೆಚ್ಚಾದಾಗ ಸಮಾಜದಲ್ಲಿ ಸುಧಾರಣೆ ಆಗಬೇಕಿತ್ತು. ಶಿಕ್ಷಣದಿಂದ ಸಂಕೋಲೆಗಳಿಂದ ಹೊರಬರುತ್ತೇವೆ ಎಂದುಕೊಂಡಿದ್ದವು. ಆದರೆ, ಆ ಸಂಕೋಲೆಗಳಲ್ಲಿ ಸಿಕ್ಕಿ ಸಾಯುತ್ತಿದ್ದೇವೆ ಎಂದು ಬೇಸರವ್ಯಕ್ತಪಡಿಸಿದರು.
ಪ.ಮಲ್ಲೇಶ್, ಲಂಕೇಶ್, ಪ್ರೊ.ಕೆ.ರಾಮದಾಸ್, ತೇಜಸ್ವಿ ಅವರ ಒಡನಾಟದಿಂದ ವೈಚಾರಿಕ ಮನೋಭಾವ ಬೆಳೆಸಿಕೊಳ್ಳಲು ಮಾರ್ಗದರ್ಶನ ಮಾಡಿದ್ದರು. ಆದರೆ, ರಾಜಕೀಯ ಬಂದ ಮೇಲೆ ಅರ್ಧ ಇಟ್ಟುಕೊಳ್ಳಬೇಕಾಯಿತು, ಅರ್ಧ ಬಿಡಬೇಕಾಯಿತು ಎಂದು ಹೇಳಿದರು.
ಸಾಹಿತಿ ಮೂಡ್ನಕೂಡು ಚಿನ್ನಸ್ವಾಮಿ, ವಿಮರ್ಶಕ ನಟರಾಜ ಹುಲಿಯಾರ್, ಶಾಸಕ ಬಿ.ಆರ್.ಪಾಟೀಲ್, ರಾಜ್ಯ ಮಾಹಿತಿ ಹಕ್ಕು ಆಯೋಗ ಆಯುಕ್ತ ಡಾ.ಹರೀಶ್ ಕುಮಾರ್, ವಕೀಲ ಎಂ.ಶಿವಪ್ರಸಾದ್, ಅಹಿಂದ ಜವರಪ್ಪ, ಪ್ರೊ.ಕಾಳಚೆನ್ನೇಗೌಡ, ಸವಿತಾ ಪ ಮಲ್ಲೇಶ್ ಇನ್ನಿತರರಿದ್ದರು
"

*ಇವನ್ಯಾರವ ಇವನ್ಯಾರವ ಎಂದೆನಿಸದರಯ್ಯ. ಇವ ನಮ್ಮಾವ ಇವ ನಮ್ಮಾವ ಎಂದೆನಿಸಿದರಯ್ಯ ಎನ್ನ ಮನೆ ಮಗನೆಂದಿರಿಸಯ್ಯ ಅಂತ ಬಸವಣ್ಣ ಹೇಳಿದ್ದರು. ಈ ವಚನ ಹೇಳಿ ನೀವು ಯಾವ ಜಾತಿ ಎಂದು ಕೇಳುವ ದುಸ್ಥಿತಿ ಬಂದಿದೆ. ವಿದ್ಯಾವಂತರೇ ಹೆಚ್ಚು ಜಾತಿ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net