ಮೈಸೂರು-ಜೋಧ್‌ಪುರ ಮಾರ್ಗದಲ್ಲಿ ಬದಲಾವಣೆ

ರೈಲು
ರೈಲು
Published on

ಪ್ರಮುಖ ಮುಖ್ಯಾಂಶಗಳು

  • ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ
ಮೈಸೂರು: ಅಹಮದಾಬಾದ್ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಮತ್ತು ಜೋಧ್‌ಪುರ ನಡುವೆ ಸಂಚರಿಸುವ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗವನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಲಾಗಿದೆ.
ವಿಶೇಷ ರೈಲು ಏ.20 ಮತ್ತು 27ರಂದು ಮೈಸೂರಿನಿಂದ ಹೊರಡುವ ಈ ರೈಲು ವಡೋದರಾ, ರತ್ಲಾಮ್ ಮತ್ತು ಅಜ್ಮೀರ್ ಮಾರ್ಗವಾಗಿ ಜೋಧ್‌ಪುರ ತಲುಪಲಿದೆ.
 ಏ.23 ಮತ್ತು 30ರಂದು ಜೋಧ್‌ಪುರದಿಂದ ಹೊರಡುವ ಈ ರೈಲು ಅಜ್ಮೀರ್, ರತ್ಲಾಮ್ ಮತ್ತು ವಡೋದರಾ ಮಾರ್ಗವಾಗಿ ಮೈಸೂರಿಗೆ ಬರಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net