ವಧರ್ಂತಿ ಅಂಗವಾಗಿ ಚಂಡಿಕಾ ಹೋಮ

ಚಾಮುಂಡೇಶ್ವರಿ ಅಮ್ಮನವರ ವಧರ್ಂತಿ ಅಂಗವಾಗಿ ನಂಜನಗೂಡಿನ ಕಪಿಲ ತೀರದಲ್ಲಿರುವ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನೂತನ ರಥವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಅವರು ಲೋಕಾರ್ಪಣೆ ಮಾಡಿದರು.
ಚಾಮುಂಡೇಶ್ವರಿ ಅಮ್ಮನವರ ವಧರ್ಂತಿ ಅಂಗವಾಗಿ ನಂಜನಗೂಡಿನ ಕಪಿಲ ತೀರದಲ್ಲಿರುವ ಚಾಮುಂಡೇಶ್ವರಿ ಅಮ್ಮನವರ ದೇವಾಲಯದಲ್ಲಿ ನೂತನ ರಥವನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಅವರು ಲೋಕಾರ್ಪಣೆ ಮಾಡಿದರು.
Published on

ನಂಜನಗೂಡು:

ನಾಡ ದೇವತೆ, ಆದಿಶಕ್ತಿ, ಮಹಿಷಾಸುರ ಮರ್ದಿನಿ ನಾಮಾಂಕಿತ ತಾಯಿ ಚಾಮುಂಡೇಶ್ವರಿ ಅಮ್ಮನವರ ವಧರ್ಂತಿಯ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ ನಡೆಸಲಾಯಿತು.

ಮಂಗಳವಾರ ನಗರದ ಚಾಮರಾಜನಗರ ನಗರ ಮುಖ್ಯ ರಸ್ತೆಯಲ್ಲಿ ಇರುವ ಕಪಿಲ ತೀರ ನಿವಾಸಿನಿ ಚಾಮುಂಡೇಶ್ವರಿ ತಾಯಿಯ ದೇವಾಲಯದ ಯಾಗ ಶಾಲೆಯಲ್ಲಿ ಅಮ್ಮನವರ ವರ್ಧಂತಿ ಅಂಗವಾಗಿ ಶ್ರೀ ಕಂಠೇಶ್ವರ ದೇವಾಲಯದ ಪ್ರಧಾನ ಆಗಮಿಕರಾದ ನಾಗಚಂದ್ರ ದೀಕ್ಷಿತ್ ಮಾರ್ಗದರ್ಶನದಲ್ಲಿ 15 ಕ್ಕೂ ಹೆಚ್ಚು ಋದ್ವಿಜರನ್ನೊಳಗೊಂಡು ಚಂಡಿಕಾ ಯಾಗ ನಡೆಸಲಾಯಿತು.
ಮುಂಜಾನೆ 3.30ಕ್ಕೆ ಅಮ್ಮ ನವರಿಗೆ ಹಾಲು, ತುಪ್ಪ, ಮೊಸರು, ಹರಿಶಿನ ಕುಂಕುಮ ಗಂಧ, ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು. ತಾಯಿಗೆ ಮಲ್ಲಿಗೆ, ಕನಕಾಂಬರ ಸೇವಂತಿಗೆ, ವಿವಿಧ ಬಗ್ಗೆಯ ಪುಷ್ಪಗಳಿಂದ ಅಲಂಕಾಗೊಳಿಸಿ, ಚಂಡಿಕಾ ಯಾಗ ನೆರವೇರಿಸಲಾಯಿತು. ದೇವಾಲಯದ ವತಿಯಿಂದ ನಿರಂತರವಾಗಿ ಪ್ರಸಾದ ವಿತರಿಸಲಾಯಿತು.
ಚಾಮುಂಡೇಶ್ವರಿ ಅಮ್ಮನವರ ವಧರ್ಂತಿ ಅಂಗವಾಗಿ ಶ್ರೀಕಂಠೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜೆ. ಕೃಷ್ಣಅವರು ನೂತನ ರಥವನ್ನು ಲೋಕಾರ್ಪಣೆಗೊಳಿಸಿದರು.
ಅಪಾರ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಭಕ್ತರು ತಾಯಿಗೆ ನಿಂಬೆಹಣ್ಣಿನ ದೀಪ, ಬಳೆ, ಅರಿಶಿನ, ಕುಂಕುಮದಿಂದ ಪೂಜೆ ಸಮರ್ಪಿಸಿದರು. ಮುತ್ತೈದೆಯರು ಅರಿಶಿಣ, ಕುಂಕುಮ, ಬಾಗಿನವನ್ನು ವಿನಿಮಯಮಾಡಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net