ಜಿಲ್ಲೆಯಲ್ಲಿ ಒಟ್ಟು 11 ವಿಧಾನಸಭಾ ಕ್ಷೇತ್ರಗಳಿದ್ದು, ಈ ಪೈಕಿ ಹುಣಸೂರು ಮತ್ತು ವರುಣ ಕ್ಷೇತ್ರಗಳಿಗೆ ಮುಖ್ಯಮಂತ್ರಿ ‘ಯೋಗ’ ಒದಗಿದೆ. ಚಾಮುಂಡೇಶ್ವರಿ ಕ್ಷೇತ್ರಕ್ಕೂ ಎರಡು ಬಾರಿ ‘ಉಪ ಮುಖ್ಯಮಂತ್ರಿ’ ಯೋಗ ಒಲಿದಿದೆ. ಕೆ.ಆರ್.ನಗರ, ಪಿರಿಯಾಪಟ್ಟಣ, ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ, ನರಸಿಂಹರಾಜ ಹಾಗೂ ಕೃಷ್ಣರಾಜ ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ಶಾಸಕರೂ ಸಚಿವರಾಗಿದ್ದಾರೆ. ಆದರೆ, ಚಾಮರಾಜ ಕ್ಷೇತ್ರ ಮಾತ್ರ ಸಚಿವ ಸ್ಥಾನಮಾನದಿಂದ ವಂಚಿತವಾಗಿದೆ.