ನಂಜನಗೂಡಿನಲ್ಲಿ 85 ಲಕ್ಷ ರೂ. ನಗದು ದರೋಡೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಮೈಸೂರು: ನಂಜನಗೂಡು ತಾಲೂಕಿನ ಸಿಂಧುವಳ್ಳಿಪುರದಲ್ಲಿ ಗುರುವಾರ ಕೇರಳಂನ ಚಿನ್ನದ ವ್ಯಾಪಾರಿಗಳ ಕಾರನ್ನು ಅಪಘಾತಕ್ಕೀಡುಮಾಡಿದ ಗುಂಪೊಂದು 85 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ.
ಮೈಸೂರು ನಗರದಲ್ಲಿ ಚಿನ್ನದ ವ್ಯಾಪಾರ ಮುಗಿಸಿ ಸಂಜೆ ಕೇರಳಂಗೆ ನಂಜನಗೂಡು ಮಾರ್ಗವಾಗಿ ತೆರಳುತ್ತಿದ್ದ ಸಂದರ್ಭ ಅವರನ್ನು ಕಾರಿನಲ್ಲಿ ಹಿಂಬಾಲಿಸಿದ ಗುಂಪೊಂದು ದರೋಡೆ ನಡೆಸಿದೆ. ಕೇರಳಂನ ಚಿನ್ನದ ವ್ಯಾಪಾರಿಯೊಬ್ಬರು ನಗರದ ವಿವಿಧ ಚಿನ್ನದ ಮಳಿಗೆಗಳಿಗೆ ಚಿನ್ನವನ್ನು ನೀಡುತ್ತಾರೆ.
ಎಂದಿನಂತೆ ಚಿನ್ನದ ವ್ಯಾಪಾರಿ ನಗರದ ಅಶೋಕ ರಸ್ತೆಯ ಚಿನ್ನದ ಅಂಗಡಿಯೊಂದಕ್ಕೆ ಚಿನ್ನವನ್ನು ನೀಡಿ 85 ಲಕ್ಷ ರೂ. ನಗದು ಪಡೆದು ಆ ಹಣವನ್ನು ತಮ್ಮ ಬಳಿ ಕೆಲಸಕ್ಕೆ ಇರುವ ತಲಚೇರಿಯ ಅಸ್ನಿಲ್ ಹಾಗೂ ಮುಕ್‌ಸುದೂಲ್ ಹುಸೈನ್ ಅವರಿಗೆ ನೀಡುತ್ತಾರೆ. ನಂತರ ಚಿನ್ನದ ವ್ಯಾಪಾರಿ ಬಸ್‌ನಲ್ಲಿ ತೆರಳುತ್ತಾರೆ. ಅಸ್ನಿಲ್ ಹಾಗೂ ಮುಕ್‌ಸುದೂಲ್ ಹುಸೈನ್ ಕಾರಿನಲ್ಲಿ ಹಣದೊಂದಿಗೆ ಸಂಜೆ ತೆರಳುತ್ತಾರೆ.
ಕಾರಿನಲ್ಲಿ ಇವರನ್ನು ಹಿಂಬಾಲಿಸಿದ ಗುಂಪೊಂದು ನಂಜನಗೂಡು ಬಳಿಯ ಸಿಂಧುವಳ್ಳಿಪುರ ಬಳಿ ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆಯುತ್ತಾರೆ. ಈ ಸಂದರ್ಭ ಅಸ್ನಿಲ್ ಹಾಗೂ ಮುಕ್‌ಸುದೂಲ್ ಹುಸೈನ್ ಕಾರಿನಿಂದ ಇಳಿದು ಅಪಘಾತ ಹೇಗಾಯಿತು ಎಂದು ಪರಿಶಿಲಿಸುತ್ತಾರೆ.
ಈ ಸಮಯವನ್ನು ಬಳಕೆ ಮಾಡಿಕೊಂಡ ದರೋಡೆಕೋರರು ಅಸ್ನಿಲ್ ಹಾಗೂ ಮುಕ್‌ಸುದೂಲ್ ಹುಸೈನ್ ಮೇಲೆ ತೀವ್ರ ಹಲ್ಲೆ ನಡಸಿ ಕಾರಿನಲ್ಲಿದ್ದ ಹಣವನ್ನು ದೋಚಿ ಚಿನ್ನದ ವ್ಯಾಪಾರಿಗಳ ಕಾರಿನೊಂದಿಗೆ ಪರಾರಿಯಾದರು. ಚಿನ್ನದ ವ್ಯಾಪಾರಿಗಳಿಗೆ ತೀವ್ರ ಹಲ್ಲೆ ನಡೆಸಲಾಗಿದ್ದು, ಅವರ ಬಟ್ಟೆಗಳನ್ನು ಹರಿದು ಹಾಕಲಾಗಿದೆ. ಅಲ್ಲದೆ, ಅವರ ಮೊಬೈಲ್‌ಗಳನ್ನು ದರೋಡೆಕೋರರು ಕಸಿದುಕೊಂಡು ಪರಾರಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net