ಬೈಲುಕುಪ್ಪೆ ಪ್ರೌಢಶಾಲಾ ಆವರಣದಲ್ಲಿ ಇಂಟರ‌್ಯಾಕ್ಟ್ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ರೋಟರಿ ಮಿಡ್‌ಟೌನ್ ಅಧ್ಯಕ್ಷ ಬಲರಾಮ ಉದ್ಘಾಟಿಸಿದರು. ಹರೀಶ, ರಾಘವೇಂದ್ರ, ರಾಜೇಗೌಡ, ಗುರುದತ್, ಬಸವಗೌಡ ಇದ್ದರು.
ಬೈಲುಕುಪ್ಪೆ: ಇಂಟರ‌್ಯಾಕ್ಟ್ ಕ್ಲಬ್‌ನಲ್ಲಿ ಸದಸ್ಯತ್ವ ಹೊಂದಿರುವ ವಿದ್ಯಾರ್ಥಿಗಳು ನೀತಿ ಶಿಕ್ಷಣ, ವ್ಯಕ್ತಿತ್ವ, ನಾಯಕತ್ವ ಗುಣಗಳನ್ನು ಅಳವಡಿಸಿಕೊಂಡು ಧೈರ್ಯವಾಗಿ ಮುನ್ನುಗ್ಗಬಲ್ಲರು ಎಂದು ತಾಲೂಕು ರೋಟರಿ ಮಿಡ್‌ಟೌನ್ ಅಧ್ಯಕ್ಷ ಬಲರಾಮ ಅಭಿಪ್ರಾಯ ವ್ಯಕ್ತಪಡಿಸಿದರು.
ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಪ್ರೌಢಶಾಲಾ ಆವರಣದಲ್ಲಿ ತಾಲೂಕು ರೋಟರಿ ಮಿಟ್ ಟೌನ್ ವತಿಯಿಂದ ಶುಕ್ರವಾರ ಇಂಟರ‌್ಯಾಕ್ಟ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆ ವತಿಯಿಂದ ಅವರ್ತಿ ರಾಜೇಶ್ವರಿ ವಿದ್ಯಾಸಂಸ್ಥೆ, ಬೈಲುಕುಪ್ಪೆ ಸರ್ಕಾರಿ ಪ್ರೌಢಶಾಲೆ, ಕೂಮಲಾಪುರ ಪ್ರೌಢಶಾಲೆ ಹಾಗೂ ಪುಷ್ಪಾ ವಿದ್ಯಾಸಂಸ್ಥೆ ತಾಲೂಕು ರೋಟರಿ ಮಿಡ್ ಟೌನ್ ವತಿಯಿಂದ ಆಯ್ಕೆ ಮಾಡಿಕೊಂಡು ಪ್ರತಿವರ್ಷ ಪದಾಧಿಕಾರಿಗಳನ್ನು ಬದಲಾವಣೆ ಮಾಡಿ ವಿದ್ಯಾರ್ಥಿಗಳ ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ಮುಂದೆ ಬರುವಂತೆ ಪ್ರೇರೇಪಿಸುತ್ತಿದ್ದೇವೆ ಎಂದರು.
ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 62 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಮುಂದಿನ ಬಾರಿ ಹೆಚ್ಚು ಅಂಕಗಳಿಸಿ ಉತ್ತೀರ್ಣರಾದರೆ ಅಷ್ಟು ಮಕ್ಕಳಿಗೂ ನನ್ನ ವೈಯಕ್ತಿಕವಾಗಿ ಬಹುಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಲೆಯ ಇಂಟರ‌್ಯಾಕ್ಟ್ ಕ್ಲಬ್ ಅಧ್ಯಕ್ಷ ಸ್ಥಾನಕ್ಕೆ ಪಿ.ಪ್ರೇಕ್ಷಾ, ಕಾರ್ಯದರ್ಶಿ ಸ್ಥಾನಕ್ಕೆ ಮಹಮ್ಮದ್ ಬಿಲಾಲ್ ಅವರನ್ನು ಆಯ್ಕೆ ಮಾಡಿ ಪದಗ್ರಹಣ ಮಾಡಲಾಯಿತು.
ಸಂಘದ ಕಾರ್ಯ ಚಟುವಟಿಕೆಗೆ 5,000 ರೂ.ಗಳನ್ನು ವೈಯಕ್ತಿಕವಾಗಿ ಮುಖ್ಯಶಿಕ್ಷಕಿ ರಾಧಾ ಚಂದ್ರೇಗೌಡರಿಗೆ ಹಸ್ತಾಂತರಿಸಿದರು.
ಸಹಾಯಕ ಪ್ರಾಂತಪಾಲ ರಾಘವೇಂದ್ರ, ವಲಯ 6ರ ರಾಜೇಗೌಡ, ಪರಿಸರವಾದಿ ಬಸವಗೌಡ, ಮುಖ್ಯ ಶಿಕ್ಷಕ ಚಂದ್ರೇಗೌಡ, ಅವರ್ತಿ ಶಾಲೆಯ ಇಂಟರ‌್ಯಾಕ್ಟ್ ಪ್ರಾಧ್ಯಾಪಕ ಗುರುದತ್ ಮಾತನಾಡಿದರು.
ತಾಲೂಕು ರೋಟರಿ ಮಿಟ್‌ಟೌನ್ ಪ್ರಧಾನ ಕಾರ್ಯದರ್ಶಿ ಹರೀಶ್, ಮಾಜಿ ಕಾರ್ಯದರ್ಶಿ ಚೇತನ್, ರಾಜೇಗೌಡ, ಬೈಲುಕುಪ್ಪೆ ಇಂಟರ‌್ಯಾಕ್ಟ್ ಕ್ಲಬ್‌ನ ಖಜಾಂಚಿ ವಿನೋದ್, ಶಿಕ್ಷಕರಾದ ಮೇರಿ, ಸವಿತಾ, ದಿನೇಶ್, ಸದಸ್ಯರಾದ ಪೂಜಾ, ಅರುಣ, ಪ್ರೀತಮ್, ಮುಸ್ಕಾನ್,ರಮ್ಯಾ, ಇತರರಿದ್ದರು.