ಶ್ರೀ ರಾಮಕೃಷ್ಣ ಆಶ್ರಮಕ್ಕೆ ಬಿ.ವೈ. ವಿಜಯೇಂದ್ರ ಭೇಟಿ

 ನಗರದ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ವಾಮಿ ಮುಕ್ತಿದಾನಂದ ಮಹಾರಾಜ್ ಆಶೀರ್ವಾದ ಪಡೆದರು. ಪ್ರೀತಗೌಡ, ಹರ್ಷವರ್ಧನ್, ಎಲ್.ನಾಗೇಂದ್ರ ಇನ್ನಿತರರಿದ್ದರು.
ನಗರದ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸ್ವಾಮಿ ಮುಕ್ತಿದಾನಂದ ಮಹಾರಾಜ್ ಆಶೀರ್ವಾದ ಪಡೆದರು. ಪ್ರೀತಗೌಡ, ಹರ್ಷವರ್ಧನ್, ಎಲ್.ನಾಗೇಂದ್ರ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಆ.1ರಂದು ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮನ
  • ವಿವೇಕ ಸ್ಮಾರಕ ಉದ್ಘಾಟನೆ
ಮೈಸೂರು: ಆ.1ರಂದು ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಆಗಮಿಸಿ ವಿವೇಕ ಸ್ಮಾರಕವನ್ನು ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನಗರಕ್ಕೆ ದೌಡಾಯಿಸಿದರು. ನಗರದ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಸ್ವಾಮಿ ಮುಕ್ತಿದಾನಂದ ಮಹಾರಾಜ್ ಅವರೊಂದಿಗೆ ಸವಾಲೋಚನೆ ನಡೆಸಿದರು.
ಪ್ರಧಾನಿ ಅವರ ಕಾರ್ಯಕ್ರಮದ ರೂಪುರೇಷೆ, ಸ್ಮಾರಕ ಉದ್ಘಾಟನೆಗೆ ಸಂಬಂಧಿಸಿದ ವ್ಯವಸ್ಥೆ, ಆಶ್ರಮದ ವತಿಯಿಂದ ಕೈಗೊಂಡಿರುವ ಸಿದ್ಧತೆ ಕುರಿತು ಚರ್ಚೆ ನಡೆಸಿದರು. 
ಆಶ್ರಮದ ಚಟುವಟಿಕೆಗಳು ಹಾಗೂ ಸ್ಮಾರಕದ ಮಹತ್ವದ ಬಗ್ಗೆ ಸ್ವಾಮೀಜಿಗಳು ವಿಜಯೇಂದ್ರ ಅವರಿಗೆ ವಾಹಿತಿ ನೀಡಿದರು. ಇದಕ್ಕೂ ಮುನ್ನ ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಬಿಜೆಪಿ ಮುಖಂಡರಾದ ಪ್ರೀತಗೌಡ, ಹರ್ಷವರ್ಧನ್, ಎಲ್.ನಾಗೇಂದ್ರ, ಪಣೀಶ್, ಎಲ್.ಆರ್.ಮಹದೇವಸ್ವಾಮಿ, ಇನ್ನಿತರರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net