ತನಿಖೆಗೆ ಮೂರು ತಂಡ ರಚನೆ: ಅಪಹರಣ ಪ್ರಕರಣದ ಆರೋಪಿಗಳ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಗ್ರಾಮಾಂತರ ಡಿವೈಎಸ್ಪಿ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿದ್ದಾರೆ. ಈ ತಂಡವು ಅಪಹರಣಕ್ಕೆ ಒಳಗಾದ ರಾಮು ಹಾಗೂ ನಂತರ ನಡೆದ ಬೆಳವಣಿಗೆಯನ್ನು ಮುಂದಿಟ್ಟುಕೊಂಡು ತನಿಖೆ ಪ್ರಾರಂಭಿಸಿದ್ದಾರೆ. ರಾಮು ಅವರನ್ನು ನಾಲ್ವರು ಅಪಹರಣ ಮಾಡಿದ್ದರು. ಒಬ್ಬ ವ್ಯಕ್ತಿ ಹಣವನ್ನು ಸ್ವೀಕಾರ ಮಾಡಿದ್ದಾನೆ. ಈ ವ್ಯಕ್ತಿ ನಾಲ್ವರಲ್ಲಿ ಒಬ್ಬನೋ ಅಥವಾ ಐದನೇ ವ್ಯಕ್ತಿಯೋ ಎಂಬುದು ದೃಢವಾಗಿಲ್ಲ, ಈ ಕುರಿತು ತನಿಖೆ ನಡೆಯುತ್ತಿದೆ. ರಾಮು ಅವರನ್ನು ಒಂದು ಫಾರ್ಮ್ ಹೌಸ್‌ಗೆ ಕರೆದೊಯ್ಯಲಾಗಿತ್ತು. ಆ ಫಾರ್ಮ್ ಹೌಸ್‌ನಲ್ಲಿ ಈ ನಾಲ್ವರು ಆರೋಪಿಗಳು ಅಲ್ಲದೆ ಮತ್ತೆ ಇಬ್ಬರು ಇದ್ದರು. ಪ್ರಕರಣದಲ್ಲಿ 6ಕ್ಕೂ ಹೆಚ್ಚು ಜನರು ಭಾಗಿಯಾಗಿರುವ ಸಾಧ್ಯತೆ ಇದೆ.