ಕೂಡ್ಲೂರು ಗ್ರಾಮದಲ್ಲಿ ಬಸ್ ತಂಗುದಾಣ ಉದ್ಘಾಟನೆ

ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಐಟಿಸಿ ಕಂಪನಿಯ ಎಬಿಡಿ ವಿಭಾಗದಿಂದ ನೂತನವಾಗಿ ನಿರ್ಮಿಸಿರುವ ಬಸ್ ತಂಗುದಾಣವನ್ನು ಜನರಲ್ ಮ್ಯಾನೇಜರ್ ಪಿ.ಪ್ರವೀಣಕುಮಾರ್ ಉದ್ಘಾಟಿಸಿದರು. ಬಿಷಪ್ ಫಾ.ಡಾ.ಎಸ್.ಜೆ. ಪ್ರಿನ್ಸಿಸ್ ಸೆರಾರೋ,  ಫಾದರ್ ಸ್ಟ್ಯಾನ್ಲಿ ಡಿ. ಅಮ್ಮೆಡ,  ಎ.ಜೋಸೆಫ್ ಮರಿ ಇತರರು ಇದ್ದರು.
ಹನಗೋಡು ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಐಟಿಸಿ ಕಂಪನಿಯ ಎಬಿಡಿ ವಿಭಾಗದಿಂದ ನೂತನವಾಗಿ ನಿರ್ಮಿಸಿರುವ ಬಸ್ ತಂಗುದಾಣವನ್ನು ಜನರಲ್ ಮ್ಯಾನೇಜರ್ ಪಿ.ಪ್ರವೀಣಕುಮಾರ್ ಉದ್ಘಾಟಿಸಿದರು. ಬಿಷಪ್ ಫಾ.ಡಾ.ಎಸ್.ಜೆ. ಪ್ರಿನ್ಸಿಸ್ ಸೆರಾರೋ, ಫಾದರ್ ಸ್ಟ್ಯಾನ್ಲಿ ಡಿ. ಅಮ್ಮೆಡ, ಎ.ಜೋಸೆಫ್ ಮರಿ ಇತರರು ಇದ್ದರು.
Published on
ಹನಗೋಡು: ಹೋಬಳಿಯ ಕೂಡ್ಲೂರು ಗ್ರಾಮದಲ್ಲಿ ಐಟಿಸಿ ಕಂಪನಿಯ ಎಬಿಡಿ ವಿಭಾಗದಿಂದ ನೂತನವಾಗಿ ನಿರ್ಮಿಸಿರುವ ಬಸ್ ತಂಗುದಾಣವನ್ನು ಜನರಲ್ ಮ್ಯಾನೇಜರ್ ಪಿ.ಪ್ರವೀಣಕುಮಾರ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಪ್ರತಿಯೊಂದು ಗ್ರಾಮದಲ್ಲಿ ಪ್ರಯಾಣಿಕರು, ವೃದ್ಧರು, ಮಹಿಳೆಯರು ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಬಿಸಿಲು, ಮಳೆ, ಗಾಳಿಯಿಂದ ರಕ್ಷಣೆ ಪಡೆಯಲು ತಂಗುದಾಣ ಅತ್ಯವಶ್ಯ. ಈ ಭಾಗದ ತಂಬಾಕು ಬೆಳೆಗಾರರ ಮನವಿ ಮೇರೆಗೆ ತಂಗುದಾಣ ನಿರ್ಮಿಸಿಕೊಡಲಾಗಿದೆ. ಇದನ್ನು ಹಾಳಾಗದಂತೆ ನಿಗಾ ವಹಿಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ ಅವರು, ಐಟಿಸಿ ಕಂಪನಿಯು ಸಿಎಸ್‌ಆರ್ ನಿಧಿಯಿಂದ ತಂಗುದಾಣ, ಶಾಲಾ ಕಟ್ಟಡ, ಶೌಚಗೃಹ, ಕಾಂಪೌಂಡ್, ಕೆರೆ ಅಭಿವೃದ್ಧಿ ಸೇರಿದಂತೆ ಗ್ರಾಮೀಣ ಅಭಿವೃದ್ಧಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕೂಡೂರು ಚರ್ಚ್ ಫಾದರ್ ಸ್ಟ್ಯಾನ್ಲಿ ಡಿ.ಅಮ್ಮೆಡ ಮತ್ತು ಎ.ಜೋಸೆಫ್ ಮರಿ ಮಾತನಾಡಿ, ಈ ಗ್ರಾಮದಿಂದ ನಿತ್ಯ ಶಾಲಾ-ಕಾಲೇಜು ಮಕ್ಕಳು ಸೇರಿದಂತೆ ನೂರಾರು ಮಂದಿ ಪ್ರಯಾಣಿಸುತ್ತಾರೆ. ಈ ಭಾಗದ ರೈತರ ಮನವಿ ಮೇರೆಗೆ ತಂಗುದಾಣ ನಿರ್ಮಿಸಿಕೊಟ್ಟಿದ್ದಾರೆ. ತಂಗುದಾಣದಿಂದ ಕೂಡೂರು, ಲಕ್ಷ್ಮೀಪುರ, ಬೀರನಹಳ್ಳಿ, ಬೀರನಹಳ್ಳಿ ಕಾವಲ್, ಹೊಸೂರು ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದರು.
ಮೈಸೂರು ವಿಭಾಗದ ಬಿಷಪ್ ಫಾ.ಡಾ.ಎಸ್.ಜೆ. ಪ್ರಿನ್ಸಿಸ್ ಸೆರಾರೋ ಮಾತನಾಡಿದರು. ಐಟಿಸಿ ಕಂಪನಿಯ ಎಬಿಡಿ ವಿಭಾಗದ ಇಲವಾಲ ಮ್ಯಾನೇಜರ್ ಚನ್ನವಿರೇಶ, ಗ್ರಾಮದ ಆಶ್ರಯ ಸೇವಾ ಟ್ರಸ್ಟ್ ಅಧ್ಯಕ್ಷ ಜೋಸೆಫ್‌ಮರಿ, ಸಂಘಟನಾ ಕಾರ್ಯದರ್ಶಿ ಕೆ.ಪಿ. ರಾಘವೇಂದ್ರ, ತಾಲೂಕು ಪಿಡಿಒ ಸಂಘದ ಗೌರವಾಧ್ಯಕ್ಷ ರಾಮಣ್ಣ, ಔಟ್ ರೀಚ್ ಸಂಸ್ಥೆಯ ಜಿ.ಎಸ್.ಜಗದೀಶ್, ಗುತ್ತಿಗೆದಾರ ಮಹೇಶ, ಗ್ರಾಪಂ ಮಾಜಿ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net