ಯೋಗದಿಂದ ಸ್ವಸ್ಥ ಸಮಾಜ ನಿರ್ಮಾಣ

ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಕೆ. ರಘುರಾಂ ವಾಜಪೇಯಿ,  ಅಂಶಿ ಪ್ರಸನ್ನಕುಮಾರ್, ಕೆ.ಜಿ. ದೇವರಾಜು, ಶ್ರೀಹರಿ ದ್ವಾರಕನಾಥ್, ಎನ್.ಪಾಪೇಗೌಡ, ಎ.ಪಿ. ನಾಗೇಶ್ ಇದ್ದರು.
ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವವನ್ನು ಗಣ್ಯರು ಉದ್ಘಾಟಿಸಿದರು. ಕೆ. ರಘುರಾಂ ವಾಜಪೇಯಿ, ಅಂಶಿ ಪ್ರಸನ್ನಕುಮಾರ್, ಕೆ.ಜಿ. ದೇವರಾಜು, ಶ್ರೀಹರಿ ದ್ವಾರಕನಾಥ್, ಎನ್.ಪಾಪೇಗೌಡ, ಎ.ಪಿ. ನಾಗೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆ.ರಘುರಾಂ ವಾಜಪೇಯಿ ಅಭಿಪ್ರಾಯ ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವ
ಪ್ರತಿಯೊಬ್ಬರೂ ಯೋಗ, ಧ್ಯಾನ, ಪ್ರಾಣಾಯಾನದಲ್ಲಿ ತೊಡಗಿಸಿಕೊಂಡರೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಬಹುದು ಎಂದು ಸಮಾಜ ಸೇವಕ ಕೆ. ರಘುರಾಂ ವಾಜಪೇಯಿ ಹೇಳಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ಮೈಸೂರು ಯೋಗ ಒಕ್ಕೂಟದ ರಜತ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಂಚಮವೇದ ಎನ್ನಬಹುದಾದ ಯೋಗದಿಂದ ಮನಸ್ಸು ಕೂಡ ಸ್ವಸ್ಥವಾಗಿರುತ್ತದೆ ಎಂದರು.
ಯೋಗ ಪ್ರಾಚೀನ ವಿದ್ಯೆ ಹಾಗೂ ಬೃಹತ್ ಜ್ಞಾನ. ತಿರುಮಲೇ ಕೃಷ್ಣಮಾಚಾರ್ಯರು ಸೇರಿದಂತೆ ಹಲವಾರು ಮಂದಿ ಇದನ್ನು ಪ್ರಚುರಪಡಿಸಲು ಶ್ರಮಿಸಿದ್ದಾರೆ ಎಂದು ಅವರು ಸ್ಮರಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಮೈಸೂರು ಯೋಗ ಒಕ್ಕೂಟದ ಅಧ್ಯಕ್ಷ ಕೆ.ಜಿ. ದೇವರಾಜು ಅಧ್ಯಕ್ಷತೆ ವಹಿಸಿದ್ದರು. ಜಿಎಸ್‌ಎಸ್ ಯೋಗ ಫೌಂಡೇಷನ್ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್, ಶ್ರೀ ರಾಮಕೃಷ್ಣ ವಿದ್ಯಾಕೇಂದ್ರ ಮತ್ತು ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎನ್.ಪಾಪೇಗೌಡ, ಎಪಿಎನ್ ಪ್ರಾಪರ್ಟೀಸ್ ಪಾಲುದಾರ ಎ.ಪಿ. ನಾಗೇಶ್ ಭಾಗವಹಿಸಿದ್ದರು.
ಉದ್ಘಾಟನೆ ನಂತರ ನಡೆದ ಗೋಷ್ಠಿಯಲ್ಲಿ ಶರೀರ ಶಾಸ್ತ್ರ ಕುರಿತು ಮೈಸೂರು ವೈದ್ಯಕೀಯ ಕಾಲೇಜು ಅನಾಟಮಿ ವಿಭಾಗದ ಪ್ರಾಧ್ಯಾಪಕ ಡಾ.ರಾಜಪುರ ಪರಶುರಾಮ್ ಅವರು ಶರೀರ ಶಾಸ್ತ್ರ, ಚಿರಂಜೀವಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಡಾ.ಜಯಶ್ರೀ ಬಂಗೇರಿ ಅವರು ಚಿಕಿತ್ಸಾ ಯೋಗ, ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಶ್ರೀವತ್ಸ ಅವರು ಸ್ವರ ಯೋಗ ಕುರಿತು ಉಪನ್ಯಾಸ ನೀಡಿದರು.
ರಜತ ಮಹೋತ್ಸವ ಅಂಗವಾಗಿ ಮೈಸೂರು ಯೋಗ ಒಕ್ಕೂಟದ ಸದಸ್ಯರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net